ಖಾಸಗಿ ವಲಯದಿಂದಲೂ ಜನೋಪಯೋಗಿ ಕಾರ್ಯ ನಡೆಯಲಿ

7 KMT 2
Published on

ಕುಮಟಾ: ಇಲ್ಲಿನ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್‌ನವರು ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ದಿನಕರ ಶೆಟ್ಟಿ ಗುರುವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ದಿನಕರ ಅವರು, ಸರ್ಕಾರದ ಯೋಜನೆಗಳ ಹೊರತಾಗಿ ಖಾಸಗಿ ವಲಯದಿಂದಲೂ ಜನೋಪಯೋಗಿ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕು. ಅನಂತಮೂರ್ತಿ ಹೆಗಡೆಯವರ ಇಂಥ ಸೇವಾ ಕಾರ್ಯಕ್ಕೆ ಎಲ್ಲರೂ ಸದಾ ಬೆಂಬಲವಾಗಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲೂ ಅನಂತಮೂರ್ತಿ ಹೆಗಡೆ ಟ್ರಸ್ಟ್ ಮೂಲಕ ಹೆಚ್ಚಿನ ಸೇವಾಕಾರ್ಯದ ಮೂಲಕ ಅಲ್ಲಿನ ಅಗತ್ಯತೆಗಳನ್ನು ಪೂರೈಸುವಂತಗಲಿ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಟ್ರಸ್ಟಿನ ಮೂಲಕ ಜಿಲ್ಲೆಯಲ್ಲಿ ಹಲವೆಡೆ ಸಾರ್ವಜನಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಈ ಕಾರ್ಯಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆಯೂ ದೊರಕಿದೆ. ಸಾಧ್ಯವಾದಷ್ಟು ಇಂಥ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಎಲ್ಲರ ಸಹಕಾರದ ಅಗತ್ಯವಿದೆ ಎಂದರು.

ವಿನೋದ ಪ್ರಭು, ಡಾ.ಜಿ.ಜಿ. ಹೆಗಡೆ, ವಕೀಲ ಆರ್.ಜಿ. ನಾಯ್ಕ, ಕುಮಾರ ಮಾರ್ಕಾಂಡೆ, ಘಟಕ ವ್ಯವಸ್ಥಾಪಕ ಬಾನಾವಳಿಕರ, ಮಹಾಬಲೇಶ್ವರ ಹೆಗಡೆ ಬ್ಯಾಗದ್ದೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net