ಕುಂಬಾರ ಜನಾಂಗ ಸಂಘಟಿತವಾಗಲಿ

kumbara
ಚಿಕ್ಕಮಗಳೂರು ತಾಲೂಕಿನ ಹೊಸಹಳ್ಳಿಯಲ್ಲಿ ಕುಂಬಾರ ಗುಂಡಯ್ಯ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಉದ್ಘಾಟಿಸಿದರು. ಪ್ರವೀಣ್‌ಕುಮಾರ್, ಜಯಪ್ಪ, ಚಂದ್ರಮ್ಮ, ರಾಜು, ರುದ್ರಮೂರ್ತಿ ಇದ್ದರು.
Published on

ಚಿಕ್ಕಮಗಳೂರು: ಕುಂಬಾರ ಜನಾಂಗ ಸಂಘಟಿತವಾಗುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತಿಯೊಬ್ಬರೂ ಸಮುದಾಯಕ್ಕೆ ಹಾಗೂ ಗ್ರಾಮದ ಬೆಳವಣಿಗೆಗೆ ಸಹಕರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ತಿಳಿಸಿದರು.

ಹೊಸಹಳ್ಳಿಯಲ್ಲಿ ಶನಿವಾರ ಕುಂಬಾರ ಗುಂಡಯ್ಯ ಕ್ಷೇಮಾಭಿವೃದ್ಧಿ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನಾಂಗದವರು ರಾಜಕೀಯ ಹಾಗೂ ಆರ್ಥಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುವ ಮೂಲಕ ಸಮುದಾಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಯುವಕರೇ ಸಮುದಾಯದ ಶಕ್ತಿಯಾಗಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಜಯಪ್ಪ , ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಮಂಜಪ್ಪ, ಸದಸ್ಯ ರವಿಕುಮಾರ್, ಎಚ್.ಎಚ್.ರಾಜಪ್ಪ, ಎಪಿಎಂಸಿ ಮಾಜಿ ಸದಸ್ಯ ಜಿ.ಮಲ್ಲೇಗೌಡ, ಮುಖಂಡ ಎಚ್.ಎಸ್.ರಾಜು, ಎಚ್.ಜಿ.ರುದ್ರಮೂರ್ತಿ, ಮಹೇಂದ್ರಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net