

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಜನಾಂಗದ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಐಐಟಿ ಡೀನ್ ಡಾ. ಎಸ್.ಎಂ. ಶಿವಪ್ರಸಾದ ಹೇಳಿದರು.
ನಗರದ ಶ್ರೀರಾಮಕೃಷ್ಣ ವಿಶ್ವ ಭಾವೈಕ್ಯ ಮಂದಿರದ ವಾಷಿರ್ಕೋತ್ಸವ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ನಿನ್ನ ಏಳ್ಗೆಗೆ ನೀನೆ ಶಿಲ್ಪಿ ಕುರಿತು ಉಪನ್ಯಾಸ ನೀಡಿದರು.
ವಿಜ್ಞಾನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿ ಮತ್ತೆ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಅದ್ಭುತ ಆವಿಷ್ಕಾರಗಳು ನಡೆಯಲಿದ್ದು, ಯುವ ಜನಾಂಗ ಸ್ವ ಚಿಂತನೆಗಳಿಂದ ಇವುಗಳೊಂದಿಗೆ ಸ್ಪರ್ಧೆಗಿಳಿಯಬೇಕಾಗುತ್ತದೆ. ಶಿಕರ ಬೋಧನೆ ವಿದ್ಯಾಥಿರ್ಗಳ ಹೃದಯಕ್ಕೆ ಮುಟ್ಟಿ ಅವರ ಸಾಮರ್ಥ್ಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ವಿದ್ಯಾಥಿರ್ಗಳು ಚಟಗಳ ದಾಸರಾಗದೆ ವೇಗದ ಜಗತ್ತಿನಲ್ಲಿ ಜ್ಞಾನದ ಮೂಲಕ ಬದುಕುವ ಕಲೆ ಕಲಿತುಕೊಳ್ಳಬೇಕು ಎಂದರು.
ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ$್ಮಣ ಉಪ್ಪಾರ ಮಾತನಾಡಿ, ಬೇರೆಯವರೊಂದಿಗೆ ಹೋಲಿಸಿಕೊಳ್ಳವುದನ್ನು ಹಾಗೂ ಕೀಳರಿಮೆ ಬಿಟ್ಟು ಸ್ವ ಸಾಮರ್ಥ್ಯದಿಂದ, ಕಠಿಣ ಪರಿಶ್ರಮದಿಂದ ಸವಾಲುಗಳನ್ನು ಎದುರಿಸಿ ಸಾಧಿಸಬೇಕು ಎಂದರು.
ಮಂಗಳೂರಿನ ಶ್ರೀಕೃಷ್ಣ ಉಪಾಧ್ಯಾಯ ಅವರು ಯುವ ಜನತೆಯ ಉಜ್ವಲ ಆದರ್ಶ ಸ್ವಾಮಿ ವಿವೇಕಾನಂದ ಕುರಿತು ಉಪನ್ಯಾಸ ನೀಡಿದರು. ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಅಧ್ಯತೆ ವಹಿಸಿದ್ದರು.
ರಾಣೆಬೆನ್ನೂರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯ ಸ್ವಾಮಿ ಪ್ರಕಾಶಾನಂದ ಸ್ವಾಮೀಜಿ, ಗದದ ಆಶ್ರಮದ ಜಗನ್ನಾಥಾನಂದ ಸ್ವಾಮೀಜಿ, ಕಾರವಾರ ಆಶ್ರಮದ ಬುದ್ಧಿಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸೌರಭ ಅಗಳಗಟ್ಟಿ ಸ್ವಾಗತಿಸಿದರು. ಆನಂದ ಸವಣೂರ ನಿರೂಪಿಸಿದರು.