ಬಡ ಮಕ್ಕಳಿಗೆ ಹಾಲುಣಿಸಿ ಪಂಚಮಿ ಆಚರಿಸಲಿ

22CKD1-1.jpg
Published on

ಚಿಕ್ಕೋಡಿ: ಕಲ್ಲು, ಮಣ್ಣು, ನಾಗರಕ್ಕೆ ಹಾಲು ಎರೆದು ವ್ಯರ್ಥ ಮಾಡದೆ, ಬಡ, ನಿರ್ಗತಿಕ ಮಕ್ಕಳಿಗೆ ಹಾಲು ವಿತರಿಸಿ ನಾಗರ ಪಂಚಮಿ ಹಬ್ಬ ಆಚರಿಸಿ ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಹೇಳಿದರು.

ಪಟ್ಟಣದ ಇಂದಿರಾ ನಗರದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮಂಗಳವಾರ ಬಸವ
ಪಂಚಮಿ ಸಮಾರಂಭದಲ್ಲಿ ಮಕ್ಕಳಿಗೆ ಹಾಲು, ಹಣ್ಣು, ಸಿಹಿ ವಿತರಿಸಿ ಅವರು ಮಾತನಾಡಿದರು.

ಹೆಬ್ಬಾಳದ ಬಸವ ಚೇತನ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶಿವಶರಣರ ತತ್ತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರವಾದ ಹಾಲನ್ನು ನಾಗರ ಮೂರ್ತಿಗೆ ಎರೆಯಬಾರದು  ಎಂದರು.

ಜಿಲ್ಲಾ ಸಂಚಾಲಕ ಜೀವನ ಮಾಂಜರೇಕರ, ತಾಲೂಕು ಸಂಚಾಲಕ ಉದಯ ವಾಘಮಾರೆ, ತೋಳಿ ಭರಮಣ್ಣ, ಮಹೇಶ ಕಾಂಬಳೆ, ವಿಠ್ಠಲ ಮಾದರ, ಚಂದ್ರಕಾಂತ ಹುಕ್ಕೇರಿ, ಸಿದ್ದು ಪಾಟೀಲ, ವಿಶಾಲ ಮೇತ್ರೆ, ಕುಮಾರ ಗುಡಿಮನಿ, ಕರೆಪ್ಪ ಗುಡೆನ್ನವರ, ಸಿದ್ದಿಕ ಅಂಕಲಗಿ ಇತರರಿದ್ದರು. ಸಂತೋಷ ದೊಡಮನಿ ನಿರೂಪಿಸಿ, ವಂದಿಸಿದರು.

ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಚಿಕ್ಕೋಡಿ ತಾಲೂಕು ಪದಾಕಾರಿಗಳು ಬಸವ ಪಂಚಮಿ ಆಚರಿಸಿದರು. ರಾಹುಲ ಜಾರಕಿಹೊಳಿ, ಬಸವ ಚೇತನ ದೇವರು, ಜೀವನ ಮಾಂಜರೇಕರ, ಉದಯ ವಾಘಮಾರೆ, ಸಿದ್ದು ಪಾಟೀಲ, ಕುಮಾರ ಗುಡಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net