ಆಟಗಾರರಲ್ಲಿ ಕ್ರೀಡಾಸ್ಫೂರ್ತಿ ತುಂಬಿರಲಿ

h10-kusugal
Published on

ಹುಬ್ಬಳ್ಳಿ: ಪ್ರತಿಯೊಬ್ಬ ಆಟಗಾರರ ಹೃದಯಾಂತರಾಳದಲ್ಲಿ ಕ್ರೀಡಾಸ್ಫೂರ್ತಿ ತುಂಬಿರಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಎಸ್‌ಡಿಎಂಸಿ ಸದಸ್ಯ ಮಾಲತೇಶ ಸಂಕರಡ್ಡಿ ಹೇಳಿದರು.
ತಾಲೂಕಿನ ಕುಸುಗಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಬ್ಯಾಹಟ್ಟಿ ವಲಯ ಮಟ್ಟದ ಕ್ರೀಡೆಗಳಲ್ಲಿ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಶನಿವಾರ ಟ್ರೋಫಿ ವಿತರಿಸಿ ಅವರು ಮಾತನಾಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಕಲ್ಲನಗೌಡ ಕೌಜಗೇರಿ ಮಾತನಾಡಿ, ಮಕ್ಕಳು ಉತ್ತಮ ಆಹಾರ ಸೇವಿಸಿದರೆ, ಉತ್ತಮವಾಗಿ ಆಡಲು ಸಾಧ್ಯ ಎಂದರು.
ಮುಖ್ಯೋಪಾಧ್ಯಾಯನಿ ಶಿವಲೀಲಾ ಕಳಸಣ್ಣವರ, ದೈಹಿಕ ಶಿಕ್ಷಣ ಶಿಕ್ಷಕ ಗುರುನಾಥ ಬರದೇಲಿ ಮಾತನಾಡಿದರು.
ವಲಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು.
ತಾಲೂಕು ಪಂಚಾಯಿತಿ ಸದಸ್ಯ ಅಶೋಕ ಸಂಕರಡ್ಡಿ, ಭೀಮಣ್ಣ ನಾಯ್ಕರ್, ವೀರೇಶ ಮಠ, ಐ.ಎಂ. ಇಳಕಲ್ಲ, ಅಮೀರಾಬಾನು ದಲಾಲ, ಪ್ರೀತಾ ಫರ್ನಂಡಿಸ್, ಸುರೇಶ ನಾಯ್ಕ, ಪಿ.ಕೆ. ಪತ್ತಾರ, ಸುಮಾದೇವಿ ಪ್ರಸಾದ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net