ಛಾಯಾಗ್ರಾಹಕರಿಗೆ ಮಾಸಾಶನ ಸೌಲಭ್ಯ ಸಿಗಲಿ; ಜಿ.ಬಿ. ರುದ್ರಾಕ್ಷಿ

PHOTOGRAPHERS UNION
ವಿಜಯಪುರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಛಾಯಾಗ್ರಾಹಕರ ನೂತನ ಸಂಘದ ಉದ್ಘಾಟನೆಯನ್ನು ಹಿರಿಯ ಛಾಯಾಗ್ರಾಹಕ ಜಿ.ಬಿ. ರುದ್ರಾಕ್ಷಿ ನೆರವೇರಿಸಿದರು. ಸಂಜಯ ಲಡ್ಡಾದ, ಪರಮೇಶ್ ಎಸ್, ರಮೇಶ ಚವ್ಹಾಣ ಮತ್ತಿತರರಿದ್ದಾರೆ.
Published on

ವಿಜಯಪುರ: ಕಡು ಕಷ್ಠದಲ್ಲಿರುವ ಛಾಯಾಗ್ರಾಹಕರಿಗೆ ಸರ್ಕಾರ ಮಾಸಾಶನದ ವ್ಯವಸ್ಥೆ ಕಲ್ಪಿಸಬೇಕೆಂದು ನಗರದ ಹಿರಿಯ ಛಾಯಾಗ್ರಾಹಕ ಜಿ.ಬಿ. ರುದ್ರಾಕ್ಷಿ ಹೇಳಿದರು.

ಇಲ್ಲಿನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಜಿಲ್ಲಾ ಛಾಯಾಗ್ರಾಹಕರ ನೂತನ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಾವು ಛಾಯಾಗ್ರಾಹಕ ವೃತ್ತಿಯಲ್ಲಿ ಸುಮಾರು ವರ್ಷ ಸಾಗಿದ್ದೇವೆ. ಸರ್ಕಾರ ನಮ್ಮನ್ನು ಗುರುತಿಸುವಲ್ಲಿ ಮರೆತಿದೆ. ಎಲ್ಲರಿಗೂ ಸಿಗುವ ಸೌಲಭ್ಯಗಳು ನಮಗೂ ಸಿಗುವಂತಾಗಲಿ. ಮೊದಲು ಮಾಸಾಶನ ಸೌಲಭ್ಯ ಕಲ್ಪಿಸಲಿ ಎಂದರು.

ಹಿರಿಯ ಛಾಯಾಗ್ರಾಹಕ ಸಂಜಯ ಲಡ್ಡಾದ ಮಾತನಾಡಿ, ಛಾಯಾ ಚಿತ್ರ ತೆಗೆಯುವುದು ನಮ್ಮೆಲ್ಲರ ಹೆಮ್ಮೆಯ ವೃತ್ತಿ ಆಗಿದೆ. ನಮ್ಮಂಥ ಅನೇಕರು ಈ ವೃತ್ತಿಯಲ್ಲಿ ಏಳು ಬೀಳಿನ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಎಲ್ಲರ ಒಳಿತಿಗಾಗಿ ಸಂಘ ರಚಿಸಲಾಗಿದ್ದು, ಇನ್ಮುಂದೆ ಒಟ್ಟಾಗಿ ಮುನ್ನಡೆಯೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪರಮೇಶ್ ಎಸ್ ಮಾತನಾಡಿ, ಸೆ.7, 8, 9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 9ನೇ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಛಾಯಾಚಿತ್ರ ಕಲಾವಿದರು ಪಾಲ್ಗೊಳ್ಳಲಿದ್ದಾರೆ. 150ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಈ ಸಮಾವೇಶದಲ್ಲಿ ರಾಜ್ಯಮಟ್ಟದ ಗುರುವಂದನಾ ಪ್ರಶಸ್ತಿ ಹಾಗೂ ಉತ್ತಮ ಛಾಯಾಗ್ರಾಹಣ ಸಾಧಕ ಪ್ರಶಸ್ತಿ ಕೂಡಾ ಕೊಡಮಾಡಲಾಗುವುದು. ಕಾರ್ಮಿಕ ಇಲಾಖೆ ಅಡಿ ನಮ್ಮನ್ನು ಸೇರಿಸಲಾಗಿದೆ. ಆದರೆ ನಮಗೆ ಸ್ಮಾರ್ಟ್ ಕಾರ್ಡ್ ನೀಡಿಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ನಮ್ಮ ಸಂಘವನ್ನು ಸೇರ್ಪಡಿಸಿ ನಮಗೂ ಎಲ್ಲ ರೀತಿಯ ಕಲಾವಿದರಿಗೆ ಸಿಗುವ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸುತ್ತೇವೆ ಎಂದರು.

ಛಾಯಾಗ್ರಾಹಕರಾದ ಬಾಬುರಾವ ಚನ್ನಪ್ಪ ಅಕ್ಕಿ, ವಿಶ್ವನಾಥ ಚನ್ನಪ್ಪ ತನಶೆಟ್ಟಿ, ಜಾಕೀರ ಹುಸೇನ್ ಗುಂದಗಿ, ಸದಾನಂದ ದಾರಪಳ, ಸಂಜೀವಕುಮಾರ್ ಜಮಾದಾರ ಇವರಿಗೆ ಜಿಲ್ಲಾ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಾಗೇವಾಡಿ ತಾಲೂಕಾಧ್ಯಕ್ಷ ಎಸ್.ಆರ್. ಹಿರೇಮಠ, ಇಂಡಿ ತಾಲೂಕಾಧ್ಯಕ್ಷ ಸಿದ್ದು ಕುದರೆ, ಸಿಂದಗಿ ತಾಲೂಕಾಧ್ಯಕ್ಷ ವಿವೇಕ, ಬಬಲೇಶ್ವರ ತಾಲೂಕಾಧ್ಯಕ್ಷ ಜೆ.ಎನ್. ಮುಜಾವರ, ನಿಡಗುಂದಿ ತಾಲೂಕಾಧ್ಯಕ್ಷ ಸೋಮನಾಥ, ಪದಾಧಿಕಾರಿಗಳಾದ ಸತೀಶ ಕಲಾಲ, ಪ್ರಶಾಂತ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ, ಹಿರಿಯ ಚಿತ್ರ ಕಲಾವಿದ ಪಿ.ಎಸ್ ಕಡೆಮನಿ, ವಿದ್ಯಾಧರ ಸಾಲಿ, ಬಿ.ಎಸ್. ಪಾಟೀಲ, ಕಿರಣ ಸುಭಾಸ ಅಕ್ಕಿ, ಮುರಾರಿ ಕರ್ವಾ, ಪಿಂಟು ಕರ್ವಾ, ಸಮೀರ ಅಥನಿ. ಬಾಬಾಜಿ ದೇಸಾಯಿ, ಪ್ರಕಾಶ ಹಿಪ್ಪರಗಿ, ಮೋಹನ ಸಿಂಗ್ ರಜಪೂತ, ಚಂದ್ರಶೇಖರ ವಡ್ಡರ್, ರವಿ ಬಸವರಾಜ ಅಕ್ಕಿ, ಕೀಶೋರ ಖಂಡಾಗಳೆ, ಥಾಯಿರ್ ದೊಡ್ಡಮನಿ, ಆನಂದ ಕೂಡಗಿ, ಮಹೇಶ ಪಡವಳ್ಳಿ, ಇಕಬಾಲ್ ಕಲಾದಗಿ, ಸುಗುರೇಶ ಗಲ್ಫಿ ಮತ್ತಿತರರಿದ್ದರು.

ಜಿಲ್ಲಾಧ್ಯಕ್ಷ ರಮೇಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಬಿಜಾಪುರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net