

ತಾವರಗೇರಾ: ಮೊಹರಂ ಹಬ್ಬದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಕುಷ್ಟಗಿ ಸಿಪಿಐ ಯಶವಂತ ಬಿಸನಹಳ್ಳಿ ಹೇಳಿದರು.
ಇದನ್ನೂ ಓದಿ:ಬಕ್ರಿದ್ ಹಬ್ಬ ಹಿನ್ನೆಲೆ ಶಾಂತಿ ಸಭೆ
ಪಟ್ಟಣದ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದು-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಸರ್ವರೂ ಶಾಂತಿ ಸೌಹಾರ್ದತೆಯಿಂದ ಆಚರಿಸಿ . ಕಾನೂನು ಚೌಕಟ್ಟಿನಲ್ಲಿ ಪೊಲೀಸರ ಜತೆಗೆ ಸಾರ್ವಜನಿಕರು ಕೈಜೋಡಿಸಲಿ. ಹಬ್ಬದಲ್ಲಿ ಶಾಂತಿ ಕಾಪಾಡಿ. ಎಲ್ಲ ಸಮಾಜದವರು ಒಗ್ಗೂಡಿ ಹಬ್ಬವನ್ನು ಆಚರಿಸಲು ಕರೆ ನೀಡಿದರು.
ಪಿಎಸ್‌ಐ ಚಂದ್ರಪ್ಪ ಎಚ್.ಮಾತನಾಡಿ, ಶಾಂತಿಯುತವಾಗಿ ಹಬ್ಬ ಆಚರಿಸಲು ಸರ್ವರೂ ಸಹಕಾರ ನೀಡಬೇಕು. ಸಮಯ ಪಾಲನೆ ಮಾಡುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮುಖಂಡರಾದ ಬಸನಗೌಡ, ಚಂದ್ರಶೇಖರ, ಗೇಸುದ್ದೀನ್ ಮುಜಾವಾರ ಹಾಗೂ ಎಲ್ಲ ಸಮಾಜದ ಮುಖಂಡರು ಭಾಗವಹಿಸಿದ್ದರು. ಸಿಬ್ಬಂದಿ ಬಸವರಾಜ್ ಇಂಗಳದಾಳ್ ನಿರೂಪಿಸಿದರು.