

ವಿಜಯಪುರ : ಮಾನವೀಯತೆ ವಿರೋಧಿಯಾಗಿರುವ ಉಗ್ರಗಾಮಿಗಳನ್ನು ಪೋಷಿಸುತ್ತಿರುವ ಪಾಪಿ ಪಾಕಿಸ್ತಾನವನ್ನು ನಮ್ಮ ಪಾಕಿಸ್ತಾನ ಎಂದು ಕರೆದಿರುವ ಎಐಸಿಸಿ ಅಧ್ಯ ಮಲ್ಲಿಕಾರ್ಜುನ ರ್ಖಗೆ ಅವರಿಗೆ ಪಾಕ್ ಮೇಲೆ ಅಷ್ಟೊಂದು ನಮ್ಮತನವಿದ್ದರೆ ಅವರು ಅಲ್ಲಿಯೇ ಹೋಗಿ ನೆಲೆಸಲಿ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದ್ದಾರೆ.
ಪಾಕಿಸ್ತಾನ ಹೆಸರು ಹೇಳಲು ಸಹ ನಮಗೆ ನಾಚಿಕೆಯಾಗುತ್ತದೆ. ಮನುಷ್ಯತ್ವವೇ ಇಲ್ಲದ ಉಗ್ರರನ್ನು ಪೋಷಿಸುತ್ತಿರುವ ಪಾಪಿ ಪಾಕಿಸ್ತಾನವನ್ನು ನಮ್ಮ ಪಾಕಿಸ್ತಾನ ಎಂದು ಕರೆದಿರುವುದು ಖಂಡನಾರ್ಹ. ರ್ಖಗೆ ಅವರಂತಹ ಮುತ್ಸದ್ದಿ ರಾಜಕಾರಣಿಗಳ ಬಾಯಲ್ಲಿ ಪಾಕಿಸ್ತಾನ ಪ್ರೇಮ ನೋಡಿ ರೋಸಿ ಹೋಗುವಂತಾಗಿದ್ದು, ಅವರು ಕೂಡಲೇ ದೇಶದ ಜನತೆಯ ಮೆಯಾಚಿಸಬೇಕು. ಇಲ್ಲದಿದ್ದರೆ ಪಾಕ್ ಮೇಲೆ ಮಮಕಾರವಿದ್ದರೆ ಅಲ್ಲಿಯೇ ಹೋಗಿ ನೆಲಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಬೆಲೆ ಏರಿಕೆ ಸೇರಿದಂತೆ ಹಲವು ಹಗರಣಗಳು ಒಂದೆಡೆ ಇವೆ. ಇನ್ನೊಂದೆಡೆ ಮಳೆಯಿಂದ ಬೆಂಗಳೂರು ನಲುಗಿ ಹೋಗಿದೆ. ಅಲ್ಲಿನ ನಿವಾಸಿಗಳು ಅನೇಕ ತೊಂದರೆ ಅನುಭವಿಸುತ್ತಿದ್ದು, ಈ ವೇಳೆ ಅವರನ್ನು ಸಂತೈಸಿ ಸ್ಪಂದಿಸುವುದು ಬಿಟ್ಟು ಸಾಧನೆ, ಸಮಾವೇಶ ನಡೆಸುವುದರಲ್ಲಿ ಯಾವ ಅರ್ಥವಿದೆ? ಎಂದು ಪ್ರಶ್ನಿಸಿದ ರಮೇಶ ಜಿಗಜಿಣಗಿ ಅವರು, ಜನರಿಗೆ ಸ್ಪಂದಿಸುವುದು ನಿಮ್ಮ ಸಾಧನೆಯಾಗಬೇಕು. ಜನರನ್ನು ಕಡೆಗಣಿಸಿ ಸಮಾವೇಶ ನಡೆಸುವುದು ಸರಿಯೇ ಎಂದು ಪ್ರಕಟಣೆ ಮೂಲಕ ಅವರು ಕೇಳಿದ್ದಾರೆ.