

ಅಥಣಿ: ಮಕ್ಕ-ಳಿ-ಗೆ ಸಂಸ-ತಿ, ಆಧ್ಯಾ-ತ್ಮಿಕತೆ ಬಗ್ಗೆ ಅರಿ-ವು ಮೂಡಿ-ಸ-ಬೇಕು. ಅಂದಾಗ ಸನಾ-ತ-ನ ಧರ್ಮ ಉಳಿ-ಯ-ಲು ಸಾಧ್ಯ ಎಂದು ಆನೆಗುಂದಿ ಮಹಾಸಂಸ್ಥಾನ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇ-ಳಿ-ದ-ರು.
ಪಟ್ಟಣದ ಗುರುಸೇವಾ ಪರಿಷತ್ ಸಂದಿಂದ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಹಮ್ಮಿ-ಕೊಂಡಿ-ದ್ದ ವಸಂತ ವೇದ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಸಂಬಂಧಗಳು ಗಟ್ಟಿಯಾಗಬೇಕು. ಸನಾತನ ಧರ್ಮದ ಆಚರಣೆಗಳು ಮುಂದುವರಿಯಬೇಕು. ಮಾನಸಿಕ, ದೈಹಿಕ ನೆಮ್ಮದಿ ಜತೆಗೆ ಸಂತೋಷದಿಂದ ಬದುಕಲು ವಸಂತ ವೇದ ಶಿಬಿರವು ಬಹಳ ಮುಖ್ಯವಾಗಿದೆ. ಯುವಕರು ಎಲ್ಲರನ್ನೂ ಸನ್ಮಾರ್ಗದತ್ತ ಕೊಂಡೊ-ಯ್ಯು-ವ ಕೆಲ-ಸ-ದ-ಲ್ಲಿ ಮುನ್ನಡೆಯಬೇ-ಕು ಎಂದರು. ಗುರು ಸೇವಾ ಸಂದ ಅಧ್ಯಕ್ಷ ಯೋಗೇಶ ಬಡಿಗೇರ, ಕಾರ್ತಿಕ ಮಿರಜಕರ, ಸಂಜು ಬಡಿಗೇರ, ಶಂಕರ ಮಿರಜಕರ, ಭೀಮರಾವ ಬಡಿಗೇರ, ಬಳವಂತ ಪತ್ತಾರ, ಭರಮು ಬಡಿಗೇರ ಇತ-ರ-ರಿದ್ದರು.