ಮಕ್ಕಳ ಓದಿನತ್ತ ಪಾಲಕರು ನಿಗಾವಹಿಸಲಿ

MUL VARSHIKOSTAVA
Published on

ಮುಳಗುಂದ: ಕನ್ನಡ ಅಥವಾ ಇಂಗ್ಲಿಷ್ ಯಾವುದೆ ಭಾಷೆ, ಮಾಧ್ಯಮ ಇರಲಿ, ಮಕ್ಕಳು ಅದನ್ನು ಓದಿ ತಿಳಿದುಕೊಳ್ಳುವ ಸರಿಯಾದ ಮಾರ್ಗ ಅನುಸರಿಸುತ್ತಾರೊ ಇಲ್ಲವೊ ಎಂಬುದರ ಕಡೆ ಪಾಲಕರು ನಿಗಾ ಇಟ್ಟಿರಬೇಕು ಎಂದು ನಿವೃತ್ತ ಡಿಡಿಪಿಐ ಎಂ.ಎ. ರಡ್ಡೆರ ಹೇಳಿದರು.

ಇಲ್ಲಿನ ಕಲಾಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಎಂಎಸ್ ಶಿಕ್ಷಣ ಸಮಿತಿಯ ಸಿಬಿಬಿ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ 9ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಇಂಗ್ಲಿಷ್ ಶಿಕ್ಷಣದೊಂದಿಗೆ ಕನ್ನಡ ಕಲಿಕೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು.

ನಿವೃತ್ತ ಡಿಡಿಪಿಐ ಎಂ.ಎ. ರಡ್ಡೆರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ನಿರ್ದೇಶಕ ಡಾ.ಎಸ್.ಸಿ. ಚವಡಿ, ಫಕೀರಯ್ಯ ಅಮೋಘಿಮಠ, ಪಿ.ಎ. ವಂಟಕರ, ಸಿದ್ದು ಕುರ್ತಕೋಟಿ, ಇತರರಿದ್ದರು. ನಂತರ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net