ಪಾಲಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲಿ

31 GJD 4 MANAVI
Published on

ಗಜೇಂದ್ರಗಡ: ಮಕ್ಕಳು ಮತ್ತು ಯುವ ಜನಾಂಗದಲ್ಲಿ ಮನೋರೋಗ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಿಭಕ್ತ ಕುಟುಂಬವೂ ಒಂದು ಬಹುಮುಖ್ಯ ಕಾರಣವಾಗಿದೆ ಎಂದು ಧಾರವಾಡದ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.

ಮಾತೋಶ್ರೀ ಬಸಮ್ಮನವರು ಸಂಗನಗೌಡರು ಪಾಟೀಲ ಅವರ 20ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್​ದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮಕ್ಕಳ ಶ್ರೇಯಸ್ಸಿನಲ್ಲಿ ತಾಯಿಯ ಪಾತ್ರ’ ಎಂಬ ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಪಾಲಕತ್ವ ಎನ್ನುವುದು ಸುಲಭದ ಮಾತಲ್ಲ. ಮಕ್ಕಳನ್ನು ಶೈಕ್ಷಣಿಕವಾಗಿ, ಸನ್ಮಾರ್ಗದಲ್ಲಿ ಕರೆದೊಯ್ಯುವುದು ಪಾಲಕರಿಗೆ ದೊಡ್ಡ ಸವಾಲಾಗಿದೆ. ಪ್ರತಿಯೊಂದು ಮಗುವಿನಲ್ಲಿ ಒಂದು ವಿಶೇಷತೆ ಇರುತ್ತದೆ. ಅದನ್ನು ತಾಯಿಯಾದವಳು ಗುರುತಿಸಬೇಕು. ಪಾಲಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು. 70 ದಶಕಗಳ ಹಿಂದೆ ಅನ್ನ, ಜ್ಞಾನ, ಅರಿವು ನೀಡಿದ ಬಸಮ್ಮ ತಾಯಿಯವರ ಕಾರ್ಯ ಶ್ಲಾಘನೀಯ ಎಂದರು.

ಮನಶಾಸ್ತ್ರಜ್ಞೆ ಡಾ. ಅನುಪಮಾ ಆನಂದ ಪಾಂಡುರಂಗಿ ಮಾತನಾಡಿ, ತಾಯಿಯರು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಬೇಕು. ಪ್ರಸ್ತುತ ದಿನಗಳಲ್ಲಿ ಮೊಬೈಲ್​ಫೋನ್ ಗೀಳಿನಿಂದ ಹೊರತರಲು ತಾಯಂದಿರು ಶ್ರಮಿಸಬೇಕು ಎಂದರು.

ಅಂಗನವಾಡಿ ಕಾರ್ಯಕರ್ತರು, ಮಹಿಳಾ ಪೋಲಿಸ್ ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಅನ್ನಪೂರ್ಣಮ್ಮ ಪಾಟೀಲ, ಡಾ.ಪಾರ್ವತಿಬಾಯಿ ಚವಡಿ, ಮಂಜುಳಾ ರೇವಡಿ, ವಿಡ್ಯಾ ಬಂಡಿ, ಶಾರದಾ ರಾಠೋಡ, ಮಕ್ತುಂಬಿ ಹಣಗಿ, ಮಂಜುಳಾ ಹುಲ್ಲಣ್ಣವರ, ಸಹನಾ ಮತ್ತಿಕಟ್ಟಿ, ನಿಲಮ್ಮ ಬಳುಟಗಿ, ರಾಜೇಶ್ವರಿ ಕಾಲವಾಡಮಠ, ಸುಮಂಗಳಾ ಇಟಗಿ, ಐ.ಎಸ್. ಪಾಟೀಲ, ಶಿವರಾಜ ಘೊರ್ಪಡೆ, ಸಿದ್ದಣ್ಣ ಬಂಡಿ, ವಿ.ಬಿ. ಸೋಮನಕಟ್ಟಿಮಠ, ಮುರ್ತಜಾ ಡಾಲಾಯತ, ರಾಜು ಸಾಂಗ್ಲಿಕರ, ಎ.ಪಿ. ಗಾಣಿಗೇರ, ಬಸವರಾಜ ಚನ್ನಿ, ಯಲ್ಲಪ್ಪ ಬಂಕದ, ವೆಂಕಟೇಶ ಮುದಗಲ್ಲ, ಉಮೇಶ ರಾಠೋಡ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net