ಸಂಘ-ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಲಿ

PH 07
Published on

ಆಳಂದ: ಎಲ್ಲೆಡೆ ಸಂಘ- ಸಂಸ್ಥೆಗಳು ಆರಂಭವಾಗುತ್ತಿದ್ದು, ಇವುಗಳು ಜನಪರವಾಗಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ನುಡಿದರು.

ಮಾದನಹಿಪ್ಪರಗಾದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಆರಂಭ, ಪದಾಧಿಕಾರಿಗಳ ಪದಗ್ರಹಣ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿವಿಧೆಡೆ ಉದ್ಯೋಗ ಮಾಡುತ್ತಿರುವ ಗ್ರಾಮದ ಯುವಕರೆಲ್ಲರೂ ಸೇರಿ ಶಾಲಾ ಮಿತ್ರ ಟ್ರಸ್ಟ್ ಸ್ಥಾಪಿಸಿದ್ದು, ಇದರೆಡೆ ಹಲವು ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜನೆ ಹಾಕಿಕೊಂಡಿದ್ದಾರೆ. ಈ ಟ್ರಸ್ಟ್ ಜನರಿಗೆ ಬೆಳಕಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.

ಡಾ.ಯಲ್ಲಪ್ಪ ಇಂಗಳೆ ಮಾತನಾಡಿದರು. ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯರು, ಗ್ರಾಪಂ ಅಧ್ಯಕ್ಷೆ ಸುವರ್ಣಾ, ಆರಕ್ಷಕ ಉಪ ನಿರೀಕ್ಷಕ ಟಿ.ದಿನೇಶ, ನಿವೃತ್ತ ಶಿಕ್ಷಕರಾದ ಬಸವಣ್ಣಪ್ಪ ಸಾತಲಗಾಂವ್, ನಾಗೇಂದ್ರಪ್ಪ ಹಳೆಮನಿ, ಶಾಲುಬಾಯಿ ಪತ್ತಾರ್, ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಪರೇಣೆ, ಪ್ರಮುಖರಾದ ಬಸವರಾಜ ಅರಳಿಮಾರ, ಮೈಬೂಬ್ ಪಣಿಬಂದ್, ಮಹಾಂತೇಶ ಸಣ್ಣಮನಿ, ಗೌರಿಶಂಕರ ರೂಗಿ, ಹರಿದಾಸ ಹಜಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net