ನಿಸ್ವಾರ್ಥ ದಾನಿಗಳ ಸಂಖ್ಯೆ ಹೆಚ್ಚಾಗಲಿ

6
Published on


ಮೈಸೂರು:
ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವಾ ಮನೋಭಾವವುಳ್ಳ ದಾನಿಗಳ ಸಂಖ್ಯೆ ಹೆಚ್ಚಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.


ಹೊಸಮಠದ ನಟರಾಜ ಸಭಾ ಭವನದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ, ನಾರಾಯಣ ಸೇವಾ ಸಂಸ್ಥೆ, ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್, ಗುರು ಪುಷ್ಕರ ಜೈನ ಸೇವಾ ಸಮಿತಿ ಬಳ್ಳಾರಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮಾಡ್ಯುಲರ್ ಕೃತಕ ಅಂಗಗಳು ಕೈ ಮತ್ತು ಕಾಲಿನ ಅಂಗಗಳ ಮಾಪನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಇರುವವರೆಲ್ಲ ಯಾವುದೇ ಚುನಾವಣೆಗೆ ನಿಲ್ಲುವವರಲ್ಲ. ಯಾವುದೇ ಸ್ವಾರ್ಥ , ಜಾತಿ, ಧರ್ಮ, ಬೇಧವಿಲ್ಲದೆ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದಾರೆ. ಸುಮಾರು 60 ಲಕ್ಷ ರೂ.ಮೌಲ್ಯದ ಕೈಕಾಲುಗಳ ಕೃತಕ ಅಂಗಗಳನ್ನು ಅಳತೆ ತೆಗೆದುಕೊಂಡು ಸುಮಾರು 350ಕ್ಕೂ ಹೆಚ್ಚು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇವರ ಸೇವೆ ಜತೆಗೆ ನನ್ನದು ಸಣ್ಣ ಅಳಿಲು ಸೇವೆ ಸೇರಿಕೊಳ್ಳಲಿ ಎಂದು 50 ಸಾವಿರ ರೂ.ಗಳನ್ನು ನನ್ನ ಸ್ವಂತ ಹಣದಿಂದ ನೀಡುತ್ತಿದ್ದೇನೆ ಎಂದರು.

ಎಲ್ಲರಿಗೂ ಸರ್ಕಾರವೇ ಅನುಕೂಲ ಮಾಡಲು ಸಾಧ್ಯವಿಲ್ಲ. ಇಂತಹ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬಂದು ಬಡವರ ಪಾಲಿಗೆ ದಾರಿದೀಪವಾಗಬೇಕು. ಈ ಅವಕಾಶವನ್ನು ಪ್ರತಿಯೊಬ್ಬ ಅಂಗವಿಕಲರೂ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮಿಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯನಂದತೀರ್ಥ ಸ್ವಾಮೀಜಿ, ಪ್ರಾಂತ್ಯ ಅಧ್ಯಕ್ಷ ಲಯನ್ ಹೇಮಂತ್ ಕುಮಾರ್ ಬನ್ಸಾಲಿ, ನಗರ ಪಾಲಿಕೆ ಸದಸ್ಯರಾದ ಮಂಜುನಾಥ್, ಎಸ್.ಬಿ.ಎಂ.ಮಂಜು, ಮುಖಂಡರಾದ ಪಾರ್ಥ ಸಾರಥಿ, ಶಂಕರೇಗೌಡ, ದಿನೇಶ್‌ಗೌಡ, ಲಯನ್ ಸುರೇಶ್ ಗೋಲ್ಡ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net