ಗ್ರಾಮೀಣ ಕಲಾವಿದರ ಸಂಖ್ಯೆ ಹೆಚ್ಚಾಗಲಿ

23-MDG-2P1
Published on

ಮೂಡಿಗೆರೆ: ಮಕ್ಕಳಲ್ಲಿ ಕಲಾತ್ಮಕ ಭಾವನೆ ಬೆಳೆಸಲು ಸರ್ಕಾರ ಶಾಲಾ ಹಂತದಲ್ಲಿಯೇ ಪ್ರತಿಭಾ ಕಾರಂಜಿ ಏರ್ಪಡಿಸಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ನಿಡುವಾಳೆ ಸರ್ಕಾರಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣ ಪ್ರದೇಶದಲ್ಲಿ ಕಲಾವಿದರು ಹೆಚ್ಚಾಗಿದ್ದಾರೆ. ಪ್ರತಿ ಹಳ್ಳಿಯಲ್ಲಿರುವ ಕಲಾವಿದರ ಕಲೆಯನ್ನು ಶೋಧಿಸಿ ತರಬೇಕು. ಗ್ರಾಮೀಣ ಭಾಗದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಾಗಬೇಕು. ವೃತ್ತಿರಂಗಭೂಮಿ ಚಲನಚಿತ್ರ ಮತ್ತಿತರೆ ವಿಭಾಗದಲ್ಲಿ ಕಲಾವಿದರಾಗಿ ಬೆಳೆಯಬೇಕಾದರೆ ಶಾಲೆ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕಲಾತ್ಮಕ ಶಿಕ್ಷಣ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಣ ಪಡೆದ ಬಳಿಕ ಎಲ್ಲ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ, ಕೃಷಿ, ಕೈಗಾರಿಕೆ, ಮತ್ತಿತರೆ ಕಡೆ ಉದ್ಯೋಗ ಕಂಡುಕೊಳ್ಳಬೇಕಾಗುತ್ತದೆ. ಜತೆಗೆ ಕಲಾವಿದರಾದರೆ ಉತ್ತಮ ಜೀವನ ನಡೆಸುವ ಜತೆಗೆ ಜನರಿಗೆ ಮನರಂಜನೆ ಒದಗಿಸಬಹುದಾಗಿದೆ. ಕಲಾವಿದರಾಗಲು ತರಬೇತಿ ಪಡೆಯಬೇಕಾಗಿದೆ ಹಾಗಾಗಿ ಪ್ರತಿಭಾ ಕಾರಂಜಿಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ನವೀನ್ ಹಾವಳಿ, ಮುಖಂಡರಾದ ಸತೀಶ್ ಮರ್ಕಲ್, ಸಚಿನ್, ಸೋಮೇಶ್, ಮುಖ್ಯಶಿಕ್ಷಕ ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net