

ರಾವಂದೂರು: ವಿವಿಧ ನಿಗಮ, ಮಂಡಳಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಳ್ಳುವವರು ಜನರೊಡನೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಮರದೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೂತನ ನಿರ್ದೇಶಕ ಆರ್.ಎಸ್. ಕುಮಾರ್‌ವಿಜಯ್ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸರ್ಕಾರ ಮತ್ತು ಜನರ ಪ್ರೀತಿಯನ್ನು ಪಡೆಯುವುದರ ಜತೆಗೆ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸವಂತಾಗಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಆರ್.ಎಸ್.ಚಿಕ್ಕವೀರಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಕೆ.ಹೊಲದಪ್ಪ, ಆರ್.ಎಸ್.ವಿಜಯಕುಮಾರ್, ಆರ್.ಎಸ್.ಉದಯಕುಮಾರ್, ವಿಜೇಂದ್ರ, ವಿಶ್ವೇಶ್ವರಯ್ಯ, ಆರ್.ಎಸ್.ಸುರೇಶ್, ಸುಭಾಷ್ ಮತ್ತಿತರರು ಹಾಜರಿದ್ದರು.