

ಗೋಕಾಕ: ಅಲೆಮಾರಿ ಜನಾಂಗ ಶಿಕ್ಷಣದೊಂದಿಗೆ ಸರ್ಕಾರದ ಸೌಲಭ್ಯ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.
ನಗರದ ಎಪಿಎಂಸಿ ಬಳಿ ಇರುವ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ ಈಚೆಗೆ ಭೇಟಿ ನೀಡಿ ಅವರ ಸ್ಥಿತಿ, ಗತಿ ಅವಲೋಕಿಸಿ ಅಲೆಮಾರಿ ಸಮುದಾಯ ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣ ಇಲ್ಲದೆ, ಮೌಢ್ಯದಲ್ಲಿ ಬದುಕುತ್ತಿರುವ ಅಲೆಮಾರಿ ಸಮುದಾಯವನ್ನು ಮುಂದೆ ತರಲು ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದ್ದು, ಅಧಿಕಾರಿಗಳು ಅದನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಅಲೆಮಾರಿ ಜನಾಂಗದ ಶ್ರೇಯೋಭಿವೃದ್ಧಿಗೆ 6.20 ಕೋಟಿ ರೂ. ಬಿಡುಗಡೆಯಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಬಳಕೆಯಾಗದೆ ಹಾಗೆ ಉಳಿದುಕೊಂಡಿದೆ. ಶೀಘ್ರದಲ್ಲೇ ಅದನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯಮಾಡಬೇಕು ಎಂದರು. ಆನಂದ ಕುಮಾರ್ , ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲ್ಲಬನ್ನವರ ಸೇರಿದಂತೆ ಇಲಾಖೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.