ಹೊಸ ತಳಿ ಕಬ್ಬು ಬೆಳೆಯಲಿ

28Manjari1
Published on

ಮಾಂಜರಿ: ರೈತರು ಕಡಿಮೆ ವೆಚ್ಚದಲ್ಲಿ ಹೊಸ ತಳಿ ಕಬ್ಬು ಬೆಳೆದು ಒಂದು ಎಕರೆ ಪ್ರದೇಶದಲ್ಲಿ 150 ಟನ್ ಕಬ್ಬು ಇಳುವರಿ ಪಡೆಯಲು ಸಾಧ್ಯವಿದೆ ಎಂದು ದತ್ತ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಗಣಪತರಾವ ಪಾಟೀಲ ಹೇಳಿದರು.

ಸಮೀಪದ ಇಂಗಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪಿಕೆಪಿಎಸ್ ಸಂಘ ಮತ್ತು ದತ್ತ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಖಾನೆ ತಜ್ಞರಿಂದ ನೀರು, ಮಣ್ಣು, ಕಬ್ಬಿನ ಎಲೆ ತಪಾಸಣೆ ಮಾಡಿಸಿ ಅಗತ್ಯ ಇರುವ ಗೊಬ್ಬರ, ನೀರಿನ ಪ್ರಮಾಣದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಪುಣೆಯ ವಸಂತದಾದಾ ಶುಗರ್ ಇನ್‌ಸ್ಟಿಟ್ಯೂಟ್‌ನ ಡಾ. ಪ್ರೀತಿ ದೇಶಮುಖ ಮಾತನಾಡಿ, ರೈತರು ಹಸಿರು ಗೊಬ್ಬರಕ್ಕೆ ಮಹತ್ವ ನೀಡಬೇಕು ಎಂದು ತಿಳಿಸಿದರು.

ಪುಣೆಯ ವಸಂತದಾದಾ ಶುಗರ್ ಇನ್‌ಸ್ಟಿಟ್ಯೂಟ್‌ನ ತುಷಾರ ಶಿತೊಳೆ ಮಾತನಾಡಿ, ಕಬ್ಬು ಸಸಿಗಳ ಬಗ್ಗೆ ಮಾಹಿತಿ ನೀಡಿದರು. ಶಿರಗುಪ್ಪಿ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಸದಲಗಾ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ ಮಾತನಾಡಿದರು.

ಗಣಪತರಾವ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಘುನಾಥರಾವ್ ಪಾಟೀಲ, ಉಪಾಧ್ಯಕ್ಷ ಶರದಚಂದ್ರ ಪಾಠಕ, ನಿರ್ದೇಶಕರಾದ ಅಮರ ಯಾದವ, ಇಂದ್ರಜಿತ್ ಪಾಟೀಲ, ಜ್ಯೋತಿಕುಮಾರ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆ ಕೃಷಿ ತಜ್ಞ ಅರುಣ ಎ.ಎಸ್.ಪಾಟೀಲ, ಶ್ರೀಶೈಲ ಹೆಗ್ಗಾನಿ, ಎಂ.ವಿ.ಪಾಟೀಲ ಇತರರಿದ್ದರು. ಇಂಗಳಿ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ್ ಮನೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net