

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಸುಭದ್ರತೆಯತ್ತ ಸಾಗಿದೆ. ಎಲ್ಲರಲ್ಲೂ ರಾಷ್ಟ್ರೀಯ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಭವ್ಯ ಭಾರತವಾಗಿ ಹೊರಹೊಮ್ಮಲು ಸಾಧ್ಯ ಎಂದು ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಒಗ್ಗಟ್ಟು ಒಡಮೂಡಬೇಕು. ಅತಿಥಿ ದೇವೋಭವ ಎಂಬ ಸಂಸ್ಕಾರಗುಣ ವಿಶಾಲವಾಗಿ ವ್ಯಾಪಿಸಿದಾಗ ನಮ್ಮ ದೇಶವು ಸಂಘರ್ಷ ಮುಕ್ತವಾಗಲಿದೆ ಎಂದರು.
ಗ್ರಾಮದ ವಿವಿಧ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ನೀಡಿದರು. ಬಳಿಕ ಶಿಶುಪಾಲನಾ (ಕೂಸಿನ ಮನೆ) ಕೇಂದ್ರವನ್ನು ಶಾಸಕ ಎಂ.ಆರ್ ಪಾಟೀಲ ಉದ್ಘಾಟಿಸಿದರು.
ಮುಖಂಡರಾದ ಮಾಲತೇಶ ಶ್ಯಾಗೋಟಿ, ದಾನಪ್ಪ ಗಂಗಾಯಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಮಡಿವಾಳರ, ಉಪಾಧ್ಯಕ್ಷ ಸಾಹೇಬೀ ಫಕ್ರುಸಾಬ್ ಭದ್ರಾಪೂರ, ಎಸ್ಡಿಎಂಸಿ ಸದಸ್ಯ ಲಾಲಸಾಬ್(ಅಪ್ಪಣ್ಣ) ನದಾಫ್, ಶಾಲಾ ಮುಖ್ಯಸ್ಥೆ ಭಾರತಿ ಜೋಶಿ, ಸುಜಾತಾ ಪಾಳೇದ, ಮಂಜುನಾಥ ಗೌಡರ, ಪ್ರಕಾಶ ರೋಡೆ, ಮಾಂತೇಶ ಗಾಣಿಗೇರ, ಚಂದ್ರಶೇಖರ ಪಡಸುಣಗಿ, ಗಿರೀಶ ಗಾಂಡೋಳಕರ, ಚಂದ್ರಶೇಖರ ಉಜ್ಜಿನಕೊಪ್ಪ, ವಿದ್ಯಾ ಪೂಜಾರ, ಸಂಗೀತಾ ಅಣ್ಣಿಗೇರಿ, ಮಂಜುಳಾ ಗಲಗಲಿ, ಸಲ್ಮಾ ಭದ್ರಾಪೂರ, ನಿಂಗಮ್ಮ ಬಾವಲಿ, ವಿಜಯಲಕ್ಷ್ಮೀ ಬಾರಕೇರ ಇತರರು ಇದ್ದರು.