ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲಿ

12..13
ಮಲಾಬಾದ್ ಗ್ರಾಮದ ಮುಲ್ಲಾ ಅಸೋಸಿಯೇಷನ್ ಶಾಖೆಯ ನಾಮಲಕ ಉದ್ಘಾಟಿಸಲಾಯಿತು. ಮೆಹಬೂಬ್ ಮುಲ್ಲಾ, ಮಾಜಿ ಶಾಸಕ ಶಹಜಾನ್ ಡೊಂಗರ್‌ಗಾಂವ್, ಮೊಹಮ್ಮದ್ ಮುಲ್ಲಾ ಇತರರಿದ್ದರು.
Published on

ಸಂಬರಗಿ: ರಾಜ್ಯದ ಮುಸ್ಲಿಂ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮುಲ್ಲಾ ಅಸೋಷಿಯೇಷನ್ ರಾಜ್ಯಾಧ್ಯಕ್ಷ ಮೆಹಬೂಬ್ ಐ.ಮುಲ್ಲಾ (ಬಳಬಟ್ಟಿ) ಹೇಳಿದರು.

ಸಮೀಪದ ಮಲಾಬಾದ ಗ್ರಾಮದಲ್ಲಿ ಭಾನುವಾರ ಮುಲ್ಲಾ ಅಸೋಷಿಯೇಷನ್ ಶಾಖೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ 80 ಲಕ್ಷ. ಅದರಲ್ಲಿ ಮುಲ್ಲಾ ಸಮುದಾಯ ಸಂಖ್ಯೆ 16 ಲಕ್ಷ. ಸಮುದಾಯದ ಶಿಕ್ಷಣವೇ ದಿಕ್ಸೂಚಿ ಎಂದರು. ಮಾಜಿ ಶಾಸಕ ಶಹಾಜಹಾನ್ ಡೊಂಗರ್‌ಗಾಂವ್ ಮಾತನಾಡಿ, ಸರ್ಕಾರ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ತಂದು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಹಜರತ್ ಮೌಲಾನಾ ಮುಫ್ತಿ ಮಾತನಾಡಿದರು. ಜಾರ್ ಮುಲ್ಲಾ, ರಜಾಕ್ ಮುಲ್ಲಾ , ರಮಜಾನ್ ಮುಲ್ಲಾ, ಸುಬ್ರಾಯ್ ತೇಲಿ, ಶಿವಾನಂದ ಗೋಲಭಾವಿ, ಶಿವಾನಂದ ಕುಳ್ಳೊಳ್ಳಿ, ರಹೀಮ್ ಮುಲ್ಲಾ, ಮೆಹಬೂಬ್ ಮುಲ್ಲಾ, ಬೀರಪ್ಪ ಉಗಾರೆ, ಬಸಗೌಡ ಪಾಟೀಲ,ದಲಿತ ಮುಖಂಡ ರವಿ ಬನಸೋಡೆ, ಧರೆಪ್ಪ ಕಲಮಡಿ, ಮಲ್ಲಪ್ಪ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net