ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Rbk manavi
ರಬಕವಿ ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಅವಳಿ ನಗರದ ಜಂಗಮ ಸಮಾಜ ಹಾಗೂ ಹಿಂದುಪರ ಸಂಘಟನೆ ಮುಖಂಡರು ಹಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿ ಕೊಲೆ ಪ್ರಕರಣದ ಆರೋಪಿ ಜಿಹಾದಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು. ಜಿ.ಎಸ್. ಅಮ್ಮಣಗಿಮಠ, ನಂದಕುಮಾರ ಗಾಯಕವಾಡ, ಶಿವಾನಂದ ಕಾಗಿ, ಸಂಜಯ ತೆಗ್ಗಿ ಇದ್ದರು.
Published on

ರಬಕವಿ/ಬನಹಟ್ಟಿ: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯವಾಗಿದ್ದು, ಇಂತಹ ಪ್ರಕರಣದಲ್ಲಿ ಆರೋಪಿ ಜಿಹಾದಿಗೆ ಎನ್ ಕೌಂಟರ್ ಅಥವಾ ಗಲ್ಲು ಶಿಕ್ಷೆಯಂಥ ಕಠಿಣ ಶಿಕ್ಷೆ ನೀಡಬೇಕೆಂದು ವಕೀಲರು ಹಾಗೂ ರಬಕವಿ ಜಂಗಮ ಸಮಾಜದ ಅಧ್ಯಕ್ಷ ಜಿ. ಎಸ್. ಅಮ್ಮಣಗಿಮಠ ಗೃಹ ಸಚಿವರಿಗೆ ಒತ್ತಾಯಿಸಿದರು.

ರಬಕವಿ ಬನಹಟ್ಟಿ ಜಂಗಮ ಸಮಾಜ ಹಾಗೂ ಅವಳಿ ನಗರದ ಹಿಂದುಪರ ಸಂಘಟನೆ ಮುಖಂಡರು ಜಂಟಿಯಾಗಿ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಸಂಜೆ ಕೆಲ ಕಾಲ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಆರೋಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ವಿಲವಾಗಿದೆ. ಕಾನೂನೂ ಸುವವ್ಯಸ್ಥೆ ಹಾಳಾಗುತ್ತಿದೆ. ತಕ್ಷಣ ಆರೋಪಿಗೆ ಗಲ್ಲು ಶಿಕ್ಷೆಯಾಗಲೇಬೇಕು ಎಂದು ಅಗ್ರಹಿಸಿದರು.

ಇದೇ ಸಂದರ್ಭ ಹಿಂದುಪರ ಸಂಘಟನೆ ಮುಖಂಡ ನಂದಕುಮಾರ ಗಾಯಕವಾಡ ಮಾತನಾಡಿ, ರಾಜ್ಯದ ಅನೇಕ ಕಡೆಗಳಲ್ಲಿ ಲವ್ ಜಿಹಾದ್‌ನಂತಹ ಹೇಯ ಕೃತ್ಯಗಳನ್ನು ಎಸಗುವ ಜಿಹಾದಿಗಳಿಗೆ ಗಲ್ಲು ಶಿಕ್ಷಯಾಗಬೇಕು. ಗೃಹ ಸಚಿವರು ಹೇಳುವಂತೆ ಇದೊಂದು ಸಹಜ ಕೊಲೆ ಎಂದು ಹೇಳುವುದು, ನ್ಯಾಯಸಮ್ಮತವಲ್ಲ. ಕೂಡಲೇ ಸೂಕ್ತ ತನಿಖೆ ನಡೆಸಬೇಕಲ್ಲದೆ, ಬಾಲಕಿಯ ಪಾಲಕರಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಕಚೇರಿ ಎದಿರು ಕೆಲಕಾಲ ಸಂಘಟಕರು ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು.
ಈರಯ್ಯ ವಿಭೂತಿಮಠ, ಈಶ್ವರ ಕಾಡದೇವರ, ಸಂಜು ಅಮ್ಮಣಗಿಮಠ, ಸಂಜಯ ಅಮ್ಮಣಗಿಮಠ, ಶಿವಾನಂದ ಕಾಗಿ, ಯಮನಮ್ಮ ಕೋರಿ, ಮಹಾದೇವಯ್ಯ ಮಠಪತಿ, ದುಂಡಯ್ಯ ಕಾಡದೇವರ, ನಗರಸಬೆ ಮಾಜಿ ಅಧ್ಯಕ್ಷ ಸಂಜಯ ತೆಗ್ಗಿ, ಸತೀಶ ಬಂಗಿ, ಶೇಖರಯ್ಯ ಹಿರೇಮಠ, ಶಿನಾನಂದ ಮಠ ಸೇರಿ ಅವಳಿ ನಗರದ ನೂರಾರು ಜಂಗಮ ಹಾಗೂ ಹಿಂದುಪರ ಸಂಘಟನೆ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net