ಸಕಾಲದಲ್ಲಿ ಹಣ ಮರುಪಾವತಿ ಮಾಡಲಿ

16 ALVANDI 02
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಮುಖರಾದ ವೆಂಕನಗೌಡ ಹಿರೇಗೌಡ್ರ, ವೀರೇಶ, ಶಿವಪ್ರಸಾದ, ಡಾ.ಮಂಜುನಾಥ, ದುರಗಪ್ಪ, ಶೋಭಾ, ಗಂಗಾಧರ ಇತರರು ಇದ್ದರು.
Published on

ಅಳವಂಡಿ: ಹೈನುಗಾರಿಕೆ ಮೂಲಕ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ರಾಬಕೊವಿ ನಿರ್ದೇಶಕ ವೆಂಕನಗೌಡ ಹಿರೇಗೌಡ್ರ ತಿಳಿಸಿದರು.

ಸಮೀಪದ ಬೆಟಗೇರಿಯಲ್ಲಿ ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವಧರ್ನ ಸಂಸ್ಥೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್), ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಬಳ್ಳಾರಿಯಿಂದ 4ನೇ ಹಂತದ ಕ್ಷೀರ ಸಂಜೀವಿನಿ ಯೋಜನೆಯಡಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಸಂಘದ ಮಹಿಳಾ ಸದಸ್ಯರಿಗೆ 6.50 ಲಕ್ಷ ರೂ. ಅನುದಾನ ನೀಡಿದ್ದು, ಸದಸ್ಯರು ಈ ಹಣವನ್ನು ಹೈನುಗಾರಿಕೆ ಅಭಿವೃದ್ಧಿಗೆ ಬಳಸಿ, ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದರಿಂದ ಉಳಿದ ಸದಸ್ಯರಿಗೂ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಅನುದಾನಕ್ಕೆ ಯಾವುದೇ ರೀತಿ ಬಡ್ಡಿ ಇರುವುದಿಲ್ಲ. ಇದರ ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಿ, ಸದಸ್ಯರಿಗೆ ವಿವಿಧ ತರಬೇತಿ ನೀಡುವ ಮೂಲಕ ಹೈನುಗಾರಿಕೆಯಲ್ಲಿ ಪ್ರಗತಿ ಹೊಂದುವಂತೆ ಪ್ರೋತ್ಸಾಹಿಸಿ, ಕ್ಷೇತ್ರ ಭೇಟಿ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದರು.

ವೈದ್ಯಾಧಿಕಾರಿ ಮಂಜುನಾಥ ಮಾತನಾಡಿ, ದುಡ್ಡು ಇಲ್ಲದಿದ್ದರೆ ಬದುಕು ನಿರ್ವಾಹಣೆ ಕಷ್ಟ. ಶ್ರಮಪಟ್ಟು ಹಣಗಳಿಸಿದರೆ ಕುಟುಂಬದ ಆರ್ಥಿಕ ಪರಸ್ಥಿತಿ ಸುಧಾರಣೆ ಜತೆಗೆ ಆರೋಗ್ಯದಿಂದ ಉತ್ತಮ ಜೀವನ ನಡೆಸಬಹುದು. ಆರೋಗ್ಯಕರ ಜೀವನ ಅಡುಗೆ ಮನೆಯಿಂದ ಸಾಧ್ಯ ಎಂದರು.

ವಕೀಲ ಶಿವಪ್ರಸಾದ ಹಾರೋಗೇರಿ, ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶೋಭಾ ಕವಲೂರು, ಉಪಾಧ್ಯಕ್ಷೆ ಸುನಂದಾ ನಾಗರಡ್ಡಿ, ವೈದ್ಯಾಧಿಕಾರಿ ಮಂಜುನಾಥ, ಮಾಜಿ ತಾಪಂ ಸದಸ್ಯ ವೀರೇಶ ಸಜ್ಜನ, ವಕೀಲ ಶಿವಪ್ರಸಾದ ಹಾರೋಗೇರಿ, ರಾಬಕೊವಿ ಉಪ ವ್ಯವಸ್ಥಾಪಕ ಡಾ.ಗಂಗಾಧರ ದಿವಟರ, ಮೇವು ಅಭಿವೃದ್ಧಿ ಅಧಿಕಾರಿ ಹನುಮಂತಗೌಡ, ವಿಸ್ತರಣಾಧಿಕಾರಿ ಕಾಶಿಂಸಾಬ ಬೆಟಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net