ಮಠಗಳು ಭಕ್ತರಿಗೆ ಜ್ಞಾನ ನೀಡಲಿ

gld 8-1
ಗುಳೇದಗುಡ್ಡ ಪಟ್ಟಣದ ಮುರುಘಾಮಠದ ನೀಲಕಂಠ ಮಹಾಪೂಜ್ಯರ 25ನೇ ಪುಣ್ಯಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಮುರುಘಾಮಠದ ಕಾಶಿನಾಥ ಸ್ವಾಮಿಗಳು, ಕೋಟೆಕಲ್ಲನ ಹೊಳೆಹುಚ್ಚೇಶ್ವರ ಸ್ವಾಮಿಗಳು ಇತರರಿದ್ದರು.
Published on

ಗುಳೇದಗುಡ್ಡ: ಭಕ್ತಿ ಧರ್ಮ ಸಂಸ್ಕೃತಿ ನಮ್ಮ ಜೀವಾಳವಾಗಬೇಕು. ಭಕ್ತಿಯಿಂದಲೇ ಜಗತ್ತು ಗೆಲ್ಲಬಹುದು. ಭಕ್ತಿ ಶಾಂತಿಯುತ ಬದುಕಿಗೆ ದಾರಿ ಮಾಡಿಕೊಡುತ್ತದೆ. ನೆಮ್ಮದಿ ಬದುಕಿಗೆ ದೇವಸ್ಥಾನ, ಮಠಗಳಿಗೆ ಭೇಟಿ ನೀಡಬೇಕೆಂದು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

ಪಟ್ಟಣದ ಮುರುಘಾಮಠದ ನೀಲಕಂಠ ಮಹಾಪೂಜ್ಯರ 25ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮುರುಘರಾಜೇಂದ್ರ ಶಿವಯೋಗಿಗಳ ಗದ್ದುಗೆಗೆ ಹಾಗೂ ನೀಲಕಂಠ ಗುರುಗಳ ರಜತ ಮೂರ್ತಿಗೆ ಮಹಾರುದ್ರಾಭಿಷೇಕ, ಭವ್ಯರಥೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಕ್ತರಿಗೆ ಜ್ಞಾನ, ಅನ್ನ, ನೆರಳು ನೀಡುವುದು ಮಠಗಳ ಕೆಲಸ. ಯುವಕರಿಗೆ ಸಂಸ್ಕಾರ ಕೊಡಬೇಕು. ಜ್ಞಾನದ ಪಾರಮಾರ್ಥಿಕ ಸಾಧನೆ ಅವಶ್ಯ. ಜ್ಞಾನ ಬೋಧನೆ ಮಾಡಬೇಕು. ಸನ್ಮಾರ್ಗದಲ್ಲಿ ನಡೆಯಬೇಕು. ಮುರುಘಾಮಠ ಭಕ್ತರಿಗೆ ಕಾಮಧೇನು ಕಲ್ಪತರು ಇದ್ದ ಹಾಗೆ ಎಂದು ತಿಳಿಸಿದರು.

ಇಲಳಕಲ್ಲದ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಮಹಾಸ್ವಾಮಿಗಳು ಮಾತನಾಡಿ, ಶರಣ ಸಂಸ್ಕೃತಿ ಮಕ್ಕಳಿಗೆ ಆಧಾರ ಸ್ತಂಭವಾಗಬೇಕು. ಶಿಕ್ಷಣ, ಸಂಸ್ಕಾರ ಕಲಿಸಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಮಠ ಮಂದಿರದಲ್ಲಿ ಸಿಗುವ ಜ್ಞಾನ, ಆಧ್ಯಾತ್ಮಿಕತೆ, ಧರ್ಮ, ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡುತ್ತದೆ. ಮಠಗಳಲ್ಲಿ ಅನ್ನದಾಸೋಹ, ಜ್ಞಾನ ದಾಸೋಹ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಮುರುಘಾಮಠದ ಕಾಶಿನಾಥ ಸ್ವಾಮಿಗಳು, ಕೋಟೆಕಲ್ಲನ ಹೊಳೆಹುಚ್ಚೇಶ್ವರ ಸ್ವಾಮಿಗಳು, ಮಸೂತಿ ಹಿರೇಮಠದ ಪ್ರಭುಕುಮಾರ ಸ್ವಾಮಿಗಳು, ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಕಾಡಸಿದ್ಧೇಶ್ವರ ಸ್ವಾಮಿಗಳು, ಚನ್ನವೀರ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಮೌನೇಶ್ವರ ಮಹಾಪುರುಷರು, ಶರಣಮ್ಮ ಸಾನ್ನಿಧ್ಯ ವಹಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಎಂ.ಬಿ. ಹಂಗರಗಿ, ಅಶೋಕ ಹೆಗಡೆ, ಶ್ರೀನಿವಾಸ ಇನಾನಿ, ಪ್ರಕಾಶ ಮುರಗೊಡ, ಶಿವಾನಂದ ಮಳ್ಳಿಮಠ, ಕಮಲಕಿಶೋರ ಮಾಲಪಾಣಿ, ಮುತ್ತು ಮೊರಬದ, ಸುಧೀರ ಗುಡ್ಡದ, ಸಾಗರ ಕೊಕಾಟಿ, ಸಚೀನ ರಾಂಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net