ಮಾದರಿ ಜೀವನಶೈಲಿ ನಮ್ಮದಾಗಲಿ

13Aigali1
Published on

ಐಗಳಿ: ಯುವಜನರಿಗೆ ಆರೋಗ್ಯ ಸಂರಕ್ಷಣೆ, ಆಹಾರ ಪದ್ಧತಿ, ಜೀವನಶೈಲಿ, ಸಂಸ್ಕಾರ ಕಲಿಸುವುದು ಮಾದರಿ ಕಷಿ ಪದ್ಧತಿ ಬಳಕೆ ಮಠದಿಂದಲೇ ಪ್ರಾರಂಭವಾಗಲಿ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಐಗಳಿ ಕ್ರಾಸ್‌ನ ಮಾಣಿಕಪ್ರಭು ವಿರಕ್ತಮಠದ ಜಾತ್ರೆಯ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಬಹತ್ ಕಷಿಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷವು ಕಷಿಮೇಳ ನಡೆಯಲು ಸಹಕಾರ ನೀಡುವ ಭರವಸೆ ನೀಡಿದರು.

ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿ, ಎಂ.ಎಸ್. ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿಯಾದಾಗಲೇ ರೈತರ ಉದ್ಧಾರ ಸಾಧ್ಯ ಎಂದರು.

ಕಷಿ ವಿಜ್ಞಾನಿಗಳಾದ ರವೀಂದ್ರ ಬೆಳ್ಳಿ, ಎಂ.ವೈ. ಕಟ್ಟಿ, ಆನಂದರಾವ್, ಮಿಲಿಂದ ಪೊದ್ದಾರ, ಶ್ರೀಕಾಂತ ಚವ್ಹಾಣ ಆಧುನಿಕ ಕಷಿ, ಗೊಬ್ಬರ, ಔಷಧಗಳ ಬಳಕೆ, ಮಣ್ಣು ನೀರು, ಬೆಳೆ ನಿರ್ವಹಣೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮೇಳದಲ್ಲಿ ಕಷಿ ಯಂತ್ರೋಪಕರಣಗಳಾದ ಔಷಧ ಪಂಪ್, ಹಿಟ್ಟಿನ ಗಿರಣಿ, ಮೇವು ಕಟಾವು ಯಂತ್ರ, ಟ್ರ್ಯಾಕ್ಟರ್, ಕಾರು, ಮೋಟಾರ್ ಸೈಕಲ್, ಗಹೋಪಯೋಗಿ ವಸ್ತುಗಳ 100 ಸ್ಟಾಲ್‌ಗಳಿವೆ.

ಅಭಿನವ ರಾಚೋಟೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮುಖಂಡ ಸಿ.ಎಸ್. ನೇಮಗೌಡ ಅಧ್ಯಕ್ಷತೆ ವಹಿಸಿದ್ದರು, ಆರ್.ಆರ್. ತೆಲಸಂಗ, ಅಪ್ಪಾಸಾಬ ಪಾಟೀಲ, ನೂರಹ್ಮದ ಡೊಂಗರಗಾಂವ, ಜಾತ್ರಾ ಕಮಿಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ, ಅಥಣಿ ಸಹಾಯಕ ಕಷಿ ನಿರ್ದೇಶಕ ನಿಂಗನಗೌಡ ಬಿರಾದಾರ, ಸಹಾಯಕ ಕಷಿ ಉಪನಿರ್ದೇಶಕಿ ರೇಖಾ ಹಳ್ಳೂರ, ಶಿಕ್ಷಕ ಕೇದಾರಿ ಬಿಜ್ಜರಗಿ, ಕೆ.ಎಸ್. ಬಿರಾದಾರ, ಜಾತ್ರಾ ಕಮಿಟಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net