ಹೊಲಗಳಿಗೆ ಸಚಿವರು ಭೇಟಿ ನೀಡಲಿ

Lng Bjp
ಲಿಂಗಸುಗೂರಿನಲ್ಲಿ ನೂತನ ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ ಅವರನ್ನು ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಆನ್ವರಿ ಸನ್ಮಾನಿಸಿದರು. ಬಿಜೆಪಿ ಮುಖಂಡ ಅಯ್ಯಪ್ಪ ಮಾಳೂರು, ನಾಗರಾಜ ಶೆಟ್ಟಿ, ಸೋಹೆಲ್, ಚನ್ನಬಸವ ವಿಟ್ಲಾಪುರ ಇದ್ದರು.
Published on

ಲಿಂಗಸುಗೂರು: ಸತತ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ ವಿವಿಧ ಬೆಳೆಗಳು ಹಾಳಾಗಿದ್ದು, ರಾಜ್ಯ ಸರ್ಕಾರ ರೈತರಿಗೆ ಕೂಡಲೇ ಪರಿಹಾರ ನೀಡಲು ಮುಂದಾಗಬೇಕೆಂದು ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಆನ್ವರಿ ಒತ್ತಾಯಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಅತಿವೃಷ್ಟಿಯಿಂದ ಹಾನಿಗೀಡಾದ ಜಮೀನುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು.

ಕೆಲವೇ ದಿನಗಳಲ್ಲಿ ರೈತರ ಕೈಗೆ ಬರಬೇಕಿದ್ದ ಬೆಳೆಗಳು ಸಂಪೂರ್ಣ ಹಾಳಾಗಿದೆ. ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಧಾವಿಸದಿದ್ದರೆ ಜನರು ಎಂದಿಗೂ ಕ್ಷಮಿಸಲಾರರು ಎಂದರು. ಬಿಜೆಪಿ ಮುಖಂಡ ಅಯ್ಯಪ್ಪ ಮಾಳೂರು, ನಾಗರಾಜ ಶೆಟ್ಟಿ, ಸೋಹೆಲ್, ಚನ್ನಬಸವ ವಿಟ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net