ಗೌರವಿಸುವ ಮನೋಭಾವ ಮೂಡಲಿ

8mnv01
ಮಾನ್ವಿಯಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ವಕೀಲರಾದ ಜಯಶ್ರೀ, ಲಕ್ಷ್ಮೀದೇವಿ ನಾಯಕ, ಸ್ಟೆಲ್ಲಾ ಶರ್ಲಾಟ್, ವಿಜಯಲಕ್ಷ್ಮೀ ಹೊಸಮನಿ, ಪಲ್ಲವಿ ಹಿರೇಮಠ ಇತರರಿದ್ದರು.
Published on

ಮಾನ್ವಿ: ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ದೌರ್ಜನ್ಯ, ಶೋಷಣೆ ನಿಲ್ಲುತ್ತಿಲ್ಲ ಎಂದು ಹಿರಿಯ ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಸಂಸ್ಕೃತಿ, ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಆದರೆ, ಪ್ರಸ್ತುತ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು ಖೇದಕರ. ಸ್ತ್ರೀಯರನ್ನು ಗೌರವಯುತವಾಗಿ ಕಾಣುವ ಮನೋಭಾವ ಮೂಡಲಿ ಎಂಬ ಉದ್ದೇಶದಿಂದ ಮಹಿಳಾ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಎಸ್‌ವಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಉಪಪ್ರಾಚಾರ್ಯೆ ಡಾ.ಸುಮಂಗಳಾ ಎಚ್.ಎಂ. ಮಾತನಾಡಿ, ಮಹಿಳೆಯರು ಮನೆಯ ನಿರ್ವಹಣೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ.ಆದ್ದರಿಂದ ಸಮತೋಲಿತ ಆಹಾರ ಹಾಗೂ ಯೋಗ ಅಭ್ಯಾಸ ಮೈಗೂಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ-ಸವಿತಾ ದಂಪತಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರನ್ನು ಸನ್ಮಾನಿಸಲಾಯಿತು. ಸಹಾಯಕ ಸರ್ಕಾರಿ ಅಭಿಯೋಜಕ ಅರ್ಚನಾ ಹನುಮೇಶ ಯಾದವ್, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಮನೋಹರ ವಿಶ್ವಕರ್ಮ, ಕೊರವಯ್ಯ ನಾಯಕ, ಚನ್ನಬಸವನಾಯಕ, ಈಶಪ್ಪ ಬೈಲ್‌ಮರ್ಚೇಡ್, ವಕೀಲರಾದ ಜಯಶ್ರೀ, ಲಕ್ಷ್ಮೀದೇವಿ ನಾಯಕ, ಸ್ಟೆಲ್ಲಾ ಶರ್ಲಾಟ್, ವಿಜಯಲಕ್ಷ್ಮೀ ಹೊಸಮನಿ, ಪಲ್ಲವಿ ಹಿರೇಮಠ, ಶಶಿಕಲಾ, ಚಂದ್ರಕಲಾ, ಶ್ರೀದೇವಿ, ಜರೀನಾಬೇಗಂ, ಐಶ್ವರ್ಯ, ಗುಮ್ಮ ಬಸವರಾಜ, ಸಮ್ಮದಾನಿ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net