

ಬೆಳಗಾವಿ: ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ, ರಾಜಕೀಯ ಲಾಭಕ್ಕಾಗಿ ಮರಾಠಿ ಭಾಷಿಕರರನ್ನು ಪ್ರಚೋದಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಗಡಿಪಾರು ಮಾಡಬೇಕೆಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿ, ಅಧಿವೇಶನದ ಸಂಧರ್ಭದಲ್ಲಿ ಮರಾಠಿ ಮೇಳಾವ್ ಮಾಡಿ, ಕನ್ನಡಿಗರು ಸಂಭ್ರಮ ಪಡುವ ಸಂದರ್ಭದಲ್ಲಿ ಪದೇಪದೇ ಶಾಂತಿ ಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತವಾಗಿ ಬಂಧಿಸಿ, ಗಡಿಪಾರು ಮಾಡುವ ಮೂಲಕ ಸರ್ಕಾರ ಕನ್ನಡದ ಹಿತ ಕಾಯಬೇಕು ಎಂದು ತಿಳಿಸಿದ್ದಾರೆ.