

ಸಿರಿಗೇರಿ: ಗ್ರಾಮದ ಪ್ರಾಕೃಪಸ ಸಂಘದಲ್ಲಿ ಸದಸ್ಯತ್ವಕ್ಕೆ ಚುನಾವಣಾ ಪಟ್ಟಿಯಲ್ಲಿ ಹೊಸದಾಗಿ ಸದಸ್ಯರ ಹೆಸರು ಸೇರಿಸಬಾರದು ಎಂದು ರೈತರು ಶನಿವಾರ ಗಣಕಯಂತ್ರ ಸಹಾಯಕ ಸುರೇಶ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಡಿಸಿಸಿ ಬ್ಯಾಂಕ್ ಚುನಾವಣಾ ವೇಳಾಪಟ್ಟಿ ಪ್ರಕಟ
ಗ್ರಾಪಂ ಸದಸ್ಯ ಎಸ್.ಎಂ.ಅಡಿವೆಯ್ಯ ಸ್ವಾಮಿ ಮಾತನಾಡಿ, ಸಂಘಕ್ಕೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸಂಘದಲ್ಲಿ ಅಧಿಕಾರ ಅಥವಾ ಚುನಾವಣೆ ದೃಷ್ಟಿಯಿಂದ ಸಾಲಗಾರ ಹಾಗೂ ಸಾಲಗಾರರಲ್ಲದ ಪಟ್ಟಿಯಿಂದ ಯಾವುದೇ ಸದಸ್ಯರನ್ನು ನೋಂದಾಯಿಸುವುದು, ತಂದೆ ಮರಣದ ನಂತರ ಮಕ್ಕಳಿಗೆ ಅಧಿಕಾರ ನೀಡುವುದು, ಹೊಸಬರಿಗೆ ಸಂಘಕ್ಕೆ ಸ್ಪರ್ಧಿಸಲು ಅವಕಾಶ ಕೊಡಬಾರದು. ಈವರೆಗೆ ಇದ್ದ ಸದಸ್ಯರ ಪಟ್ಟಿ ಪ್ರಕಾರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಇದನ್ನು ಹೊರತುಪಡಿಸಿ ಸದಸ್ಯತ್ವ ನೀಡಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಮುಖರಾದ ಎಸ್.ಎಂ.ಅಡಿವೆಯ್ಯ ಸ್ವಾಮಿ, ಡ್ರೈವರ್ ಹುಲುಗಪ್ಪ, ಬಿಚ್ಚುಗತ್ತಿ ಮಲ್ಲಯ್ಯ, ಆಟೋ ತಿಮ್ಮಯ್ಯ, ಮುದಿಯಪ್ಪ, ರಾರಾವಿ ವೆಂಕಟೇಶ್, ಕಡ್ಡಿಪುಡಿ ಶಿವಪ್ಪ, ಎನ್.ದಾನಪ್ಪ, ಯೋಗವಂತ, ತಾಳೂರು ಈರಣ್ಣ, ಬಿ.ನಾಗರಾಜ, ಕೊಳ್ಳಿ ದೊಡ್ಡಬಸಪ್ಪ, ಸಣ್ಣ ಗಾದಿಲಿಂಗಪ್ಪ ಇತರರಿದ್ದರು.