ಮಾಧ್ಯಮಗಳು ಕಾಪಾಡಲಿ ಸಾಮರಸ್ಯ

13hos1p edmilad
ನಗರ ಜುಮ್ಮಾ ಮಸೀದಿ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಹಕೀಂ, ಪತ್ರಕರ್ತ ನಾಗರಕೊಡಿಗೆ ಅವರನ್ನು ಸನ್ಮಾನಿಸಿಸಲಾಯಿತು. ಅಶ್ರಫ್ ಹಿಮಾಮಿ, ಹಿದಾಯತ್, ಅಜರ್ ಮಜೂರ್, ಸಾಬಜನ್ ಸಾಬ್ ಇತರರಿದ್ದರು.
Published on

ಹೊಸನಗರ: ಸಮಾಜದ ಆಗುಹೋಗುಗಳಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದ್ದು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಉಪನ್ಯಾಸಕ ಡಾ. ಅಬ್ದುಲ್ ಹಕೀಂ ಹೇಳಿದರು.

ತಾಲೂಕಿನ ನಗರ ಜುಮ್ಮಾ ಮಸೀದಿಯಲ್ಲಿ ಏರ್ಪಡಿಸಿದ್ದ ಈದ್ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಿಕೆಗಳು ತನ್ನದೇ ರೀತಿಯಲ್ಲಿ ಶಿಕ್ಷಣ ನೀಡುತ್ತಾ ಜನರ ಜ್ಞಾನವನ್ನು ಹೆಚ್ಚಿಸುತ್ತ ಬಂದಿವೆ. ಆದರೆ ಇಂದು ಮಾಧ್ಯಮಗಳಲ್ಲಿ ಒಂದು ಸಣ್ಣ ಘಟನೆ ಅತ್ಯಂತ ವರ್ಣರಂಜಿತವಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಕಲುಷಿತವಾಗಲು ಪರೋಕ್ಷ ಕಾರಣವಾಗುತ್ತಿವೆ. ಸಮಾಜದಲ್ಲಿ ಯಾವುದೇ ಗಂಭೀರ ಸಮಸ್ಯೆ ಎದುರಾದರೂ ಸರ್ಕಾರಗಳನ್ನು ಎಚ್ಚರಿಸಿ ಅದಕ್ಕೆ ಪರಿಹಾರ ನೀಡುವ ತಾಕತ್ತು ಮಾಧ್ಯಮ ಪ್ರಪಂಚಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜುಮ್ಮಾ ಮಸೀದಿ ಗುರುಗಳಾದ ಅಶ್ರಫ್ ಹಿಮಾಮಿ ಮಾತನಾಡಿ, ಮುಸ್ಲಿಂ ಸಮುದಾಯ ದೇಶದಲ್ಲಿ ಅತ್ಯಂತ ಹಿಂದುಳಿದಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದರು.
ಡಾಕ್ಟರೇಟ್ ಪಡೆದ ಡಾ. ಅಬ್ದುಲ್ ಹಕೀಂ, ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ರವಿ ನಾಗರಕೊಡಿಗೆ ಅವರನ್ನು ಗೌರವಿಸಲಾಯಿತು. ಮಕ್ಕಳ ದಫ್ ಕಾರ್ಯಕ್ರಮ ಗಮನ ಸೆಳೆಯಿತು.
ನಗರ ಜಮಾತ್ ಅಧ್ಯಕ್ಷ ಹಿದಾಯತ್, ಹೊಸನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು, ಮದರಸಾ ಅಧ್ಯಕ್ಷ ಅಲ್ಫಾಜ್, ದಫ್ ಉಸ್ತಾದ್, ಬಶೀರ್ ಉಸ್ತಾದ್ ಕಾಪು, ಅಜರ್ ಮಜೂರ್, ಸಾಬಜನ್ ಸಾಬ್, ಅಬ್ಬಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net