

ಕೊಳವಿ: ಶ್ರಾವಣ ಅತ್ಯಂತ ಪವಿತ್ರ ಮಾಸವಾಗಿದ್ದು, ಮಹಾತ್ಮರ ನುಡಿಗಳನ್ನು ಆಲಿಸಬೇಕು ಎಂದು ಬಬಲೇಶ್ವರದ ಗುರುಬಸವ ದೇವರು ಹೇಳಿದರು.
ಸ್ಥಳೀಯ ಗೂಳಿ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಡವಿಸಿದ್ದೇಶ್ವರ ಶರಣರ ಮಹಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತವಗ ಮಠದ ಅಜ್ಜಯ್ಯ ಸ್ವಾಮೀಜಿ ಮಾತನಾಡಿ, ಕೊಳವಿ ಗ್ರಾಮಕ್ಕೆ ಅಡವಿ ಸಿದ್ದೇಶ್ವರ ಹಾಗೂ ಸದ್ಗುರು ಬಾಳಯ್ಯಜ್ಜನ ಆಶೀರ್ವಾದ ಸದಾ ಇರುತ್ತದೆ ಎಂದರು.
ತವಗ ಮಠದ ಸಿದ್ದಲಿಂಗಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅನ್ನ ಸಂತರ್ಪಣೆ ನೆರವೇರಿತು. ಹೂಲಿಕಟ್ಟಿ ಪೂಜ್ಯಕುಮಾರ ಸ್ವಾಮೀಜಿ, ಅಂಕಲಗಿ ಬೋರಯ್ಯ ಸ್ವಾಮೀಜಿ, ಶಿರವಾರದ ಚನ್ನವೀರ ದೇವರು, ಸ್ಥಳೀಯ ಪತ್ರಯ್ಯ ಹುಲಕಂತಿಮಠ, ಬಸಯ್ಯ ಹುಲಕಂತಿಮಠ, ಯಲ್ಲಪ್ಪ ಹಿರಟ್ಟಿ, ಕಾಶಿನಾಥ ಗೋಕಾಕ, ಶ್ರೀಕಾಂತ ಮುಂಗುರವಾಡಿ, ಬಾಳೇಶ ವನಕಿ, ಮಲ್ಲಿಕಾರ್ಜುನ ಪಾಟಿಲ, ಬಿ.ಜಿ. ಹಟ್ಟಿಗೌಡರ, ಬಿ.ಎಂ. ಮಾರಿಹಾಳ ಇತರರಿದ್ದರು.