ಮಾದಿಗ ಸಮಾಜ ಮುಖ್ಯವಾಹಿನಿಗೆ ಬರಲಿ

MDG JAGRUTI
Published on

ಮುಂಡರಗಿ: ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ನಿಯೋಜನೆ ಮಾಡಿರುವ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಕುಟುಂಬದ ಅಗತ್ಯ ಮಾಹಿತಿ ಪಡೆಯಬೇಕು. ಈ ಸಮೀಕ್ಷೆ ಮೂಲಕ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯ ಆರ್ಥಿಕವಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಡಂಬಳ ಮಾದಿಗ ಸಮಾಜದ ಪ್ರಮುಖ ಮರಿಯಪ್ಪ ಸಿದ್ದಣ್ಣವರ ಹೇಳಿದರು.

ತಾಲೂಕಿನ ಡಂಬಳ ಗ್ರಾಮದಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್​ನಗರದ ಮಾದಿಗ ಸಮುದಾಯದ ಬಡಾವಣೆಯಲ್ಲಿ ಒಳಮೀಸಲಾತಿ ಸಮೀಕ್ಷೆಯಲ್ಲಿ ಕಾಲಂ 61 ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಬುಧವಾರ ಭಿತ್ತಿ ಪತ್ರದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸಮುದಾಯದ ಪ್ರತಿ ಕುಟುಂಬವೂ ಕಡ್ಡಾಯವಾಗಿ ‘ಮಾದಿಗ’ ಎಂದು ಬರೆಸಬೇಕು ಎಂದರು.

ಮಲ್ಲಿಕಾರ್ಜುನ ಗೌಡಣ್ಣವರ ಮಾತನಾಡಿ, ಸರ್ಕಾರ ಗಣತಿಯನ್ನು ಪಾರದರ್ಶಕವಾಗಿ ಮಾಡಿಸಬೇಕು. ರಾಜ್ಯದ ಪರಿಶಿಷ್ಟ ಸಮುದಾಯದ ಪ್ರತಿಯೊಂದು ಕುಟುಂಬವೂ ಗಣತಿ ಕಾರ್ಯದಲ್ಲಿ ವಂಚಿತರಾಗದಂತೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.

ನಿಂಗಪ್ಪ ಮಾದರ, ದುರಗಪ್ಪ ಗೋವಿನಕೊಪ್ಪ ಅಶೋಕ ತಳಗೇರಿ, ಗುಡದಪ್ಪ ತಳಗೇರಿ, ಭೀಮಪ್ಪ ತಳಗೇರಿ, ಲಕ್ಷ್ಮಣ ಬೆಟಗೇರಿ, ಮುತ್ತಪ್ಪ ಪೂಜಾರ, ಮರಿಯಪ್ಪ ಎನ್. ದೊಡ್ಡಮನಿ, ಸುರೇಶ ವಡ್ಡಟ್ಟಿ, ಮಲ್ಲಪ್ಪ ಹಳ್ಳಿಕೇರಿ, ಬಸಪ್ಪ ವಗ್ಗರಣಿ, ಸುರೇಶ ಪೂಜಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net