ದೇಶ ಪ್ರೇಮ ರಕ್ತಗತವಾಗಲಿ: ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್ ಅಭಿಮತ

52
Published on

ನಮ್ಮ ದೇಶಪ್ರೇಮ ಸ್ವಾತಂತ್ರೃ ದಿನಾಚರಣೆ ಸಂದರ್ಭಕಷ್ಟೇ ಸೀಮಿತಗೊಳ್ಳದೆ ಪ್ರತಿದಿನ, ಪ್ರತಿಕ್ಷಣ ರಕ್ತಗತವಾಗಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್ ಹೇಳಿದರು.

ತಾಲೂಕಿನ ಬೈಚನಹಳ್ಳಿಯ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರೃ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಭಾಷೆ ಧರ್ಮ, ಸಂಸ್ಕೃತಿಗಳನ್ನು ಮೀರಿ ಮನುಷ್ಯರೆಲ್ಲ ಒಂದೇ ಎಂಬ ಭಾವದಲ್ಲಿ ನಾವೆಲ್ಲ ಒಂದಾಗಬೇಕು. ಆ ಮೂಲಕ ದೇಶದ ಏಳಿಗೆಗೆ ದುಡಿಯಬೇಕು. ಸ್ವಾತಂತ್ರೃ ಹೋರಾಟದಲ್ಲಿ ಕರ್ನಾಟಕದ ಪಾತ್ರ ಅಭೂತಪೂರ್ವವಾದುದು. ಬ್ರಿಟಿಷರ ಕಾನೂನುಗಳ ವಿರುದ್ಧ ಹೋರಾಡಿದ ಧೀರ ಹೋರಾಟಗಾರರ ಬಲಿದಾನವನ್ನು ನಾವು ಈ ದಿನ ಸ್ಮರಿಸಬೇಕಾಗಿದೆ ಎಂದು ಹೇಳಿದರು.

ಇಂದಿನ ಯುವ ಪೀಳಿಗೆಯು ಶೈಕ್ಷಣಿಕ ಪ್ರಗತಿಯನ್ನು ಜ್ಞಾನವನ್ನು ಅಂಕಗಳಿಗೆ ಸೀಮಿತಗೊಳಿಸದೆ ಬದುಕಿನ ಭಾವಾಗಿ ಬಲಿಷ್ಠಭಾರತವನ್ನು ನಿರ್ಮಿಸಬೇಕಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಘುವರ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ.ಎಂ.ಮಂಜೇಗೌಡ, ಮಾಜಿ ಅಧ್ಯಕ್ಷ ಆಂಜನೇಯ ಗೌಡ, ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗಣ್ಣ ಇದ್ದರು. ಉಪನ್ಯಾಸಕ ಎಂ.ಎಚ್.ದಿನೇಶ್ ಸ್ವಾಗತಿಸಿದರು. ಎನ್.ಎಚ್.ರಂಗನಾಥ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net