

ಅರಟಾಳ: ಸದಸ್ಯರು, ಗ್ರಾಹಕರ ಸಹಕಾರದಿಂದ ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ. ಸಕಾಲಕ್ಕೆ ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ ಹೇಳಿದರು.
ಗ್ರಾಮದ ಮಾಳಿಂಗೇಶ್ವರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಾಲಗಾರನಷ್ಟೆ ಜಾಮೀನುದಾರರು ಹೊಣೆಗಾರರಾಗಿರುತ್ತಾರೆ ಎಂದರು.
ಸಂಘದ ಕಾರ್ಯದರ್ಶಿ ಪರಮಾನಂದ ಖ್ಯಾಡಿ ಮಾತನಾಡಿ, ಪ್ರತಿ ವರ್ಷವು ಸಂಘ ಉತ್ತಮ ಹಂತದಲ್ಲಿ ಬೆಳೆಯುತ್ತಿದೆ. ಸಂಘದ ವತಿಯಿಂದ ಮುಂದಿನ ವರ್ಷ ರೈತರಿಗೆ ಬಿತ್ತನೆ ಬೀಜ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಉಪಾಧ್ಯಕ್ಷ ಪಾಂಡಪ್ಪ ಮಾಂಗ, ಸದಸ್ಯರಾದ ಮಲ್ಲಿಕಾರ್ಜುನ ತೆಲಸಂಗ, ಈಶ್ವರಲಿಂಗ ಕಲಘಟಗಿ, ಡಾ.ವಿಲಾಸ ಜಂಬಗಿ, ರಂಗನಗೌಡ ಜಂಬಗಿ, ಸೋಮಣ್ಣ ಹಟ್ಟಿ, ಶೋಭವ್ವ ಹಿರೇಕುರಬರ, ಮಹಾದೇವಿ ಹಟ್ಟಿ, ಅಣ್ಣಪ್ಪ ಮಾಳಿ, ಸತ್ಯಪ್ಪ ಪೂಜಾರಿ, ಅರವಿಂದ ಘಾಟಗೆ, ರಮೇಶ ಜಾಧವ, ಯಲ್ಲಪ್ಪ ಹಟ್ಟಿ, ವಿಠ್ಠಲ ಹಟ್ಟಿ, ಮಲ್ಲಿಕಾರ್ಜುನ ಪೂಜಾರಿ, ಅಪ್ಪಸಾಹೇಬ ಪಾಟೀಲ, ಸತ್ಯಪ್ಪ ಮಾಳಿ, ಅಣ್ಣಪ್ಪ ಪೂಜಾರಿ ಇದ್ದರು.