ಪೂರ್ವಿಕರ ಬದುಕು ದಾರಿದೀಪವಾಗಲಿ

ಬೇಲೂರು ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯ ಗೆಲ್ಲೋಣ ವಾಕಾಥಾನ್ ಜಾಥಾದಲ್ಲಿ ಭಾಗವಹಿಸಿರುವ ಗಣ್ಯರು ಮತ್ತು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು.
ಬೇಲೂರು ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯ ಗೆಲ್ಲೋಣ ವಾಕಾಥಾನ್ ಜಾಥಾದಲ್ಲಿ ಭಾಗವಹಿಸಿರುವ ಗಣ್ಯರು ಮತ್ತು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು.
Published on

ಬೇಲೂರು: ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಮಂಗಳವಾರ ವಿವಿಧ ಸಂಘ-ಸಂಸ್ಥೆಗಳ ಅಹಯೋಗದೊಂದಿಗೆ ಆಯೋಜಿಸಿದ್ದ ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯ ಗೆಲ್ಲೋಣ ವಾಕಥಾನ್‌ಗೆ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಚಾಲನೆ ನೀಡಿದರು.

ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯ ಗೆಲ್ಲೋಣ ವಾಕಥಾನ್‌ನಲ್ಲಿ ತಾಲೂಕು ಆಡಳಿತ, ಆರೋಗ್ಯ, ಪೊಲೀಸ್, ಪುರಸಭೆ, ಲಯನ್ಸ್, ರೋಟರಿ, ರೆಡ್‌ಕ್ರಾಸ್ ಸಂಸ್ಥೆ, ಶರಣ ಸಾಹಿತ್ಯ ಪರಿಷತ್, ಕಸಾಪ, ಪತ್ರಕರ್ತರ ಸಂಘ, ಕ್ರಿಕೆಟ್ ಕ್ಲಬ್, ವಕೀಲರ ಸಂಘ, ಪತಂಜಲಿ ಯೋಗ ಕೇಂದ್ರ ಸೇರಿದಂತೆ ಇತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಚನ್ನಕೇಶವ ದೇಗುಲದಿಂದ ಕೆಂಪೇಗೌಡ ವೃತ್ತ, ಹರ್ಡಿಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಯಗಚಿ ಸೇತುವೆ ಸಮೀಪದ ಶ್ರೀ ಬಾಲಗಂಗಾಧರನಾಥಸ್ವಾಮಿ ಪುತ್ಥಳಿವರೆಗೆ ಹೆಜ್ಜೆ ಹಾಕಿದ್ದಲ್ಲದೆ, ಹೃದಯಕ್ಕಾಗಿ ಜೀವನ ಶೈಲಿ, ಆಹಾರದ ಸೇವನೆ ಬಗ್ಗೆ ನಾಮಫಲಕ ಹಿಡಿದು ಜಾಗೃತಿ ಮೂಡಿಸಲಾಯಿತು.

ಈ ವೇಳೆ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯೇ ಹೃದಯಾಘಾತಕ್ಕೆ ಹೆಚ್ಚು ಕಾರಣವಾಗುತ್ತಿದೆ. ನಮ್ಮ ಪೂರ್ವಿಕರ ಬದುಕು ನಮಗೆ ದಾರಿ ದೀಪವಾಗಬೇಕು. ದಿನನಿತ್ಯ ನಡಿಗೆ ಮತ್ತು ಯೋಗ ಅವಶ್ಯಕವಾಗಿದೆ. ಸುಭದ್ರ ದೇಶ ಕಟ್ಟಲು ಸದೃಢ ಆರೋಗ್ಯವಂತ ಪ್ರಜೆಗಳಿಂದ ಮಾತ್ರ ಸಾಧ್ಯ. ನಿತ್ಯ ತಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡಬೇಕು. ಅದರಲ್ಲೂ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ದುಶ್ಚಟಗಳೇ ಕಾರಣ. ಆದ್ದರಿಂದ ಅವುಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಆರೋಗ್ಯ ಇಲಾಖೆಯಿಂದ ಆಯೋಜಿಸಿರುವ ವಾಕಾಥಾನ್ ಜಾಥಗೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉತ್ಸಹದಿಂದ ಭಾಗವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಇದೇ ವಾಕಾಥಾನ್ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ನಿತ್ಯ ಮುಂದುವರಿಯಲಿ ಎಂದು ಸಲಹೆ ನೀಡಿದರು.

ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ದುಶ್ಚಟಗಳು, ಒತ್ತಡದ ಬದುಕು, ಕಲಬೆರಕೆ ಆಹಾರ ಪದ್ಧತಿ, ಅಸುರಕ್ಷಿತ ಆಹಾರ ಸೇವನೆ, ಮೀತಿ ಮೀರಿದ ವ್ಯಾಯಾಮ, ಕಡಿಮೆ ನಿದ್ದೆ, ಜಂಕ್‌ಫುಡ್ ಸೇವನೆಯಂತಹ ಕಾರಣಗಳಿಂದಾಗಿ ಹೃದಯ ಸಂಬಂಧಿ ರೋಗ ಉಲ್ಭಣಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪ್ರತಿದಿನ ಕನಿಷ್ಠ ಸಮಯ ನಡಿಗೆಗೆ ಮೀಸಲಿಟ್ಟರೆ ಹೃದಯದ ಆರೋಗ್ಯಕ್ಕೆ ಪೂರಕವಾಗಲಿದ್ದು, ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.

ತಾಲೂಕು ಪಂಚಾಯಿತಿ ಇಒ ವಸಂತಕುಮಾರ್, ಆರಕ್ಷಕ ನಿರೀಕ್ಷಕ ರೇವಣ್ಣ, ಪಿಎಸ್‌ಐ ಶಿವಾನಂದ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಸಿದ್ದೇಗೌಡ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ರೋಟರಿ ಕ್ಲಬ್ ಅಧ್ಯಕ್ಷ ರಂಗನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷೆ ತಾರಾಮಣಿ, ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಡಾ.ರಾಜಕುಮಾರ್ ಸಂಘದ ಅಧ್ಯಕ್ಷ ತೀಥರ್ಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net