ಬದಲಾವಣೆಗೆ ತಕ್ಕಂತೆ ಕಲಿಕೆ ಪ್ರಕ್ರಿಯೆ ಸಾಗಲಿ

blg 24-1 p.g
ಬೀಳಗಿ ತಾಲೂಕಿನ ಮನ್ನಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾರ್ಗದರ್ಶನ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ.ಗು. ಸಿದ್ದಾಪುರ ಉದ್ಘಾಟಿಸಿದರು. ಪ್ರಭಾರ ಮುಖ್ಯಶಿಕ್ಷಕ ಸೋಮಲಿಂಗ ಬೇಡರ ಇದ್ದರು.
Published on

ಬೀಳಗಿ: ಹಕ್ಕುಗಳ ರಕ್ಷಣೆ ಮತ್ತು ಕರ್ತವ್ಯಗಳ ಪಾಲನೆ ಅತಿ ಮುಖ್ಯವಾಗಿದೆ ಎಂದು ಖ್ಯಾತ ಮಕ್ಕಳ ಸಾಹಿತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ. ಗು. ಸಿದ್ದಾಪುರ ಹೇಳಿದರು.

ತಾಲೂಕಿನ ಮನ್ನಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಖ್ಯಾತ ತಜ್ಞರಿಂದ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಪಠ್ಯಕ್ರಮ, ಪರಿಸರ ಸಂರಕ್ಷಣೆ, ನಾಗರಿಕ ಹಕ್ಕು ಮತ್ತು ಕರ್ತವ್ಯಗಳು, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾಲಕ್ಕೆ ತಕ್ಕಂತೆ ಪಠ್ಯಕ್ರಮ ಬದಲಾಗುತ್ತದೆ. ಬದಲಾವಣೆಗೆ ತಕ್ಕಂತೆ ಕಲಿಕೆಯ ಪ್ರಕ್ರಿಯೆ ಸಾಗಬೇಕು. ಇಂದು ಪರಿಸರದ ಸಂರಕ್ಷಣೆ ಬಹುದೊಡ್ಡ ಸವಾಲಾಗಿದೆ. ಅದಕ್ಕಾಗಿ ಉತ್ತಮ ಗಾಳಿ, ನೆರಳು ಹೊಂದಬೇಕಾದರೆ ಮನೆಗೊಂದು ಮರ ಊರಿಗೊಂದು ವನ ಮಾಡಬೇಕಾಗಿದೆ. ಮಕ್ಕಳು ಈಗಿನಿಂದಲೇ ಸಸಿ ನೆಟ್ಟು ಮರ ಬೆಳೆಸುವ ಕಾರ್ಯಕ್ಕೆ ಇಳಿಯಬೇಕು. ಕನ್ನಡ ನಮ್ಮ ತಾಯಿ ಭಾಷೆಯಾಗಿದ್ದು, ಅದನ್ನು ಸ್ಪಷ್ಟವಾಗಿ ಓದುವುದು, ಶುದ್ಧವಾಗಿ ಬರೆಯುವುದನ್ನು ಮಾಡಬೇಕು ಎಂದರು.

ಪ್ರಭಾರ ಮುಖ್ಯಶಿಕ್ಷಕ ಸೋಮಲಿಂಗ ಬೇಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಾಲೆ ಒಳ ಮತ್ತು ಹೊರಾಂಗಣವನ್ನು ಆಕರ್ಷಣೀಯಗೊಳಿಸುವ ಸಿದ್ಧತೆಯಲ್ಲಿ ತೊಡಗಿದ್ದೇವೆ. ಮುಂದಿನ ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಕ್ರೀಡೆಗಳಿಗೆ ಆದ್ಯತೆ ನೀಡಲಾಗುವುದು. ಮಕ್ಕಳಲ್ಲಿ ವಿಷಯ ಜ್ಞಾನ ಹೆಚ್ಚಿಸುವ ಕಾರ್ಯವನ್ನೂ ಮಾಡಲಾಗುವುದೆಂದು ತಿಳಿಸಿದರು.

ಮಾಯಾವತಿ ದಡ್ಡೆನ್ನವರ ಮಾತನಾಡಿದರು.

ಕೆ. ಬಿ. ಗಾಣಗೇರ, ಆರ್. ಬಿ. ಮುಲ್ಲಾ, ಎಸ್. ಎಸ್. ಶಿರಶ್ಯಾಡ, ಬಿ.ಪಿ. ಕೋಲಾರ, ಆನಂದ ಲಮಾಣಿ, ಪ್ರತಿಭಾ ಕೋರಿಶೆಟ್ಟಿ, ಪೂಜಾ ಚನ್ನವಗೋಳ, ಜ್ಯೋತಿ ಕಲ್ಯಾಣಿ, ಶಫೀಕ್ ಕಂದಗಲ್ಲ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ಇದ್ದರು.

ಕಸ್ತೂರಿ ಪತ್ತಾರ ಸ್ವಾಗತಿಸಿದರು. ಬಿ. ಜಿ. ಗೌರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುಮಲತಾ ದಳವಾಯಿ ನಿರೂಪಿಸಿದರು. ಚಿದಾನಂದ ಕುರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net