ಮಹಿಳೆಯರ ರಕ್ಷಣೆಗೆ ಕಾನೂನು ಬಿಗಿಯಾಗಲಿ

sri march
ಶೃಂಗೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮೌನ ಮೆರವಣಿಗೆ ನಡೆಸಲಾಯಿತು. ಡಾ. ಅಣ್ಣಾದೊರೈ, ಶ್ಯಾಮಿಲಿ, ಭೂಮಿಕಾ ಹೆಗಡೆ, ಕೆ.ಸಿ.ನಾಗೇಶ್, ಡಾ. ನರಸಿಂಹ ಪ್ರಸಾದ್, ಸುವರ್ಣ ಅವಿನಾಶ್, ಸುಧಾ, ಅಭಿರಾಮ್ ಇತರರಿದ್ದರು.
Published on

ಶೃಂಗೇರಿ: ಕೋಲ್ಕತ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಚರಿತಾ ಸುಜನ್ ಒತ್ತಾಯಿಸಿದರು.

ವೈದ್ಯೆ ಕೊಲೆ ಪ್ರಕರಣ ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳೊಂದಿಗೆ ಮೌನ ಮೆರವಣಿಗೆ ನಡೆಸಿದ ನಂತರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗೌರಮ್ಮ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ದೇಶದಲ್ಲಿ ಪ್ರತಿ ದಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣ ನಡೆಯುತ್ತಲೇ ಇದೆ. ಇಂಥ ಪ್ರಕರಣ ತಡೆಗಟ್ಟಲು ಕಾನೂನು ಬಿಗಿಯಾಗಬೇಕು ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷೆ ಡಾ. ಭುವನೇಶ್ವರಿ ಬಲ್ಲಾಳ್ ಮಾತನಾಡಿ, ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಇಂಥ ಪ್ರಕರಣವಾದಾಗ ಸೀಯರು ಸಾಂಕ ಭಾವದಿಂದ ಹೋರಾಟ ಮಾಡಬೇಕು. ಅನ್ಯಾಯದ ವಿರುದ್ಧ ನಿರಂತರ ಧ್ವನಿ ಎತ್ತಿದಾಗ ಮಾತ್ರ ಇಂಥ ಸಾಮಾಜಿಕ ಪಿಡುಗು ತೊಲಗಿಸಬಹುದು ಎಂದರು.
ರೋಟರಿ, ಜೆಸಿಐ, ಪೊಲೀಸ್ ಇಲಾಖೆ, ಶಾರದಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ, ಅಭಿನವ ವಿದ್ಯಾತೀರ್ಥ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ತಾಲೂಕು ಆಶಾಕಾರ್ಯಕರ್ತೆಯರು, ಮಹಿಳಾ ಒಕ್ಕಲಿಗರ ಸಂಘ ಹಾಗೂ ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳು, ಸ್ಥಳೀಯ ವೈದ್ಯರು ಶ್ರೀಮಠದಿಂದ ತಾಲೂಕು ಕಚೇರಿವರೆಗೆ ಮುಖ್ಯಬೀದಿಯಲ್ಲಿ ಮೌನ ಮೆರವಣಿಗೆ ನಡೆಸಿದರು.
ಡಾ. ಲಕ್ಷ್ಮೀ, ಡಾ. ನಿರಂಜನ್, ಡಾ. ಲಕ್ಷ್ಮೀನಾರಾಯಣ್, ಜೆಸಿಐ ಮಾಜಿ ಅಧ್ಯಕ್ಷ ಸುಜನ್, ಕಾರ್ಯದರ್ಶಿ ರಮೇಶ್ ಶೂನ್ಯ, ವಕೀಲರಾದ ರಾಜೇಶ್ವರಿ ಹೆಗಡೆ, ಕಜಾಪ ಅಧ್ಯಕ್ಷ ಆಶೀಶ್ ದೇವಾಡಿಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net