

ಗೋಕಾಕ: ವಿದ್ಯಾರ್ಥಿಗಳ ಶೆಣಿಕ ಅನುಕೂಲಕ್ಕಾಗಿ ಲ್ಯಾಪ್ಟಾಪ್ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿನ ಎನ್ಎಸ್ಎ್ ಕಾರ್ಯಾಲಯದಲ್ಲಿ ಅರಬಾವಿ ಪಟ್ಟಣ ಪಂಚಾಯಿತಿ ಸಮಿತಿಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬುಧವಾರ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದರು. ನಗರೋತ್ಥಾನ ಯೋಜನೆಯಡಿ 4ರ ಹಂತದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗುತ್ತಿದೆ. ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ. ಸರ್ಕಾರ ಇಂಥ ಅನೇಕ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಅರಬಾವಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್ಸಿ, ಎಸ್ಟಿ ಕುಟುಂಬಗಳ ಲಾನುಭವಿಗಳಿಗೆ ಸೋಲಾರ್ ವಿತರಿಸುವ ಕಾರ್ಯವು ಸಹ ನಡೆಯುತ್ತಿದೆ. ಸುಮಾರು 21 ಲ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಕೆ ಮಾಡುತ್ತಿದ್ದು, 86 ಎಸ್ಸಿ ಮತ್ತು 22 ಎಸ್ಟಿ ಕುಟುಂಬಗಳನ್ನು ಲಾನುಭವಿಗಳಿಗಾಗಿ ಆಯ್ಕೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಲಾನುಭವಿಗಳಿಗೆ ಈ ಯೋಜನೆ ಸೌಲಭ್ಯ ತಲುಪಲಿದೆ ಎಂದು ತಿಳಿಸಿದರು.
ಅರುಣ ಗಾಡಿವಡ್ಡರ್, ಸೌಭಾಗ್ಯ ಮಾದರ, ಸೌಂದರ್ಯ ಪೂಜೇರಿ, ಕೇದಾರ್ಲಿಂಗ ಮಾಳಿ, ವಿಶಾಲ ಸಮದವರ, ಮಹಾದೇವ ಕಡಲಗಿ ಅವರಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರಾದ ನಿಂಗಪ್ಪ ಇಳಿಗೇರಿ, ಅಡಿವೆಪ್ಪ ಬಿಲಕುಂದಿ, ಸುರೇಶ ದೊಡ್ಡಲಿಂಗಣ್ಣವರ, ಬಾಳೇಶ ನಾನಪ್ಪಗೊಳ, ರಮೇಶ ಸಂಪಗಾವಿ, ಹಣಮಂತ ಕೇಂದಾರಿ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಕರೆಪ್ಪ ಗಡ್ಡಿ ಇತರರಿದ್ದರು.