ಅಲೆಮಾರಿ ಸಮುದಾಯಕ್ಕೆ ಜಮೀನು ಮಂಜೂರು ಮಾಡಲಿ

RANGA MUNIDASA
RANGAMUNIDASA
Published on

ರಾಯಚೂರು

ಪರಿಶಿಷ್ಟ ಜಾತಿ,ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮೂದಾಯ ಹಿಂದುಳಿದ ವರ್ಗಗಳ ಅಲೆಮಾರಿ ಸಮೂದಾಯಗಳಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೧೦ ಜಮೀನು ಕಾಯ್ದಿರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಅಧ್ಯಕ್ಷ ರಂಗಮುನಿದಾಸ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ನಗರದ ವಿವಿಧ ಬಡಾವಣೆಗಳಲ್ಲಿ ಅಲೆಮಾರಿ ಸಮೂದಾಯಗಳ ಜನರು ಟೆಂಟ್, ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಶಾಶ್ವತ ನೆಲೆಯಿಲ್ಲದೇ ಬದುಕುತ್ತಿರುವ ಸಮೂದಾಯ ಜನರಿಗೆ ಸೂರು ಒದಗಿಸಲು ಪಾಲಿಕೆ ಮುಂದಾಗಬೇಕು.

ಅಲ್ಲದೇ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಸಿಸಿ ರಸ್ತೆ, ನಿವೇಶನ ಹಕ್ಕುಪತ್ರ ನೀಡಬೇಕು.ಅಂಬೇಡ್ಕರ ಸಹಾಯ ಹಸ್ತ ಯೋಜನೆಯಡಿ ಅಪಘಾತ ಪರಿಹಾರ ಮತ್ತು ಸಹಜ ಮರಣ ಪರಿಹಾರ ಯೋಜನೆ ಕುರಿತು ಜಾಗೃತಿ ಮೂಡಿಸಬೇಕು, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ವಾಸಿಸುವ ಅಲೆ ಮಾರಿ ಸಮೂದಾಯಗಳ ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಬೇಕು. ಬಜೆಟ್‌ನಲ್ಲಿ ಅಲೆಮಾರಿಗಳ ಅಭಿವೃದ್ದಿ ಹೆಚ್ಚು ಅನುದಾನ ಕಾಯ್ದಿರಸ ಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡ ಈರಣ್ಣ ಯಾದವ, ಬಿ.ಹರೀಶ, ರಂಗನಾಥ, ಈರಣ್ಣ ಮೇದಾರ, ಈರಣ್ಣ,ವೆಂಕಟ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net