ಕಿಸಾನ್ ಸಮ್ಮಾನ್ ಯೋಜನೆ ಮುಂದುವರಿಸಲಿ

Kisan
Published on

ಹಾನಗಲ್ಲ: ಹಿಂದಿನ ರಾಜ್ಯ ಸರ್ಕಾರ ಘೋಷಿಸಿರುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಮುಂದುವರಿಸಬೇಕು ಎಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ತಹಸೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದೆ.

ಕೇಂದ್ರ ನೀಡುತ್ತಿರುವ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ.ಗಳೊಂದಿಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ. ನೀಡಲಾಗುತ್ತಿತ್ತು. ಅದನ್ನು ಈಗ ರಾಜ್ಯ ಸರ್ಕಾರ ರದ್ದುಗೊಳಿಸುತ್ತಿರುವುದಾಗಿ ಸುದ್ದಿ ಕೇಳಿ ಬಂದಿದೆ. ಕೃಷಿ ವಲಯ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮುಂದುವರಿಸಬೇಕು. ಅಲ್ಲದೆ, ರಾಜ್ಯ ಸರ್ಕಾರ ತನ್ನ ವಂತಿಗೆಯನ್ನು ಇನ್ನಷ್ಟು ಹೆಚ್ಚಿಸಿ ರೈತ ಸಮುದಾಯದ ಸಮಸ್ಯೆಗೆ ಸ್ಪಂದಿಸಬೇಕು. ಈ ಕುರಿತಂತೆ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಘೋಷಿಸಬೇಕು ಎಂದು ಆಗ್ರಹಿಸಿದೆ.

ತಹಸೀಲ್ದಾರರ ಪರವಾಗಿ ಶಿರಸ್ತೇದಾರ್ ಬಸವರಾಜ ಅಂಗಡಿ ಅವರು ಮನವಿ ಸ್ವೀಕರಿಸಿದರು. ಸಂಘಟನೆಯ ಸಂಸ್ಥಾಪಕ ಎಂ.ಎಸ್. ಪಾಟೀಲ, ತಾಲೂಕು ಅಧ್ಯಕ್ಷ ಮಹಲಿಂಗಪ್ಪ ಕೂಸನೂರ, ಪದಾಧಿಕಾರಿಗಳಾದ ಮಹಲಿಂಗಪ್ಪ ಬಿದರಮಳಿ, ಶಿವನಾಗಪ್ಪ ಕ್ಷೌರದ, ಮೈನುದ್ದೀನ ಮುಲ್ಲಾ, ಎಂ.ಎಂ. ಗುಲಾಮಅಲಿಷಾ, ಚನ್ನಬಸಪ್ಪ ಅಂಗಡಿ, ಶಿವನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net