ಹೈನುಗಾರರಿಗೆ ಪ್ರೋತ್ಸಾಧನ ಸದ್ಬಳಕೆಯಾಗಲಿ

oppo_0
ದೊಡ್ಡ ಹರವೇ ಗ್ರಾಮದಲ್ಲಿ ಸಚಿವ ಕೆ.ವೆಂಕಟೇಶ್ ನೂತನ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟಿಸಿದರು. ಆರ್.ಚೆಲುವರಾಜು, ಗೋವಿಂದಯ್ಯ, ಅವಿನಾಶ್, ರಘು ಇತರರು ಇದ್ದರು.
Published on

ಬೈಲಕುಪ್ಪೆ: ಹಾಲು ಉತ್ಪಾದಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರದಿಂದ ಪ್ರೋತ್ಸಾಹಧನ 5 ರೂ. ನೀಡುತ್ತಿದ್ದು, ಹೈನುಗಾರರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಬ್ಲಾಕ್ ದೊಡ್ಡ ಹರವೆ ಗ್ರಾಮದಲ್ಲಿ ಸೋಮವಾರ ನೂತನ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಒಟ್ಟು 202 ಡೇರಿ ಇದ್ದು, ನಿತ್ಯ 1.53 ಲಕ್ಷ ಲೀ. ಹಾಲು ಶೇಖರಣೆ ಆಗುತ್ತಿದೆ. ಪ್ರತಿದಿನ ಶೇಖರಣೆಯಾದ ಈ ಹಾಲು ಮಾರಾಟಕ್ಕೆ ಒಕ್ಕೂಟದವರು ಶ್ರಮಿಸಿದರೆ ಮಾತ್ರ ರೈತರ ಏಳಿಗೆಗೆ ಸಾಧ್ಯ ಎಂದು ತಿಳಿಸಿದರು.

ಮೈಮುಲ್ ಅಧ್ಯಕ್ಷ ಆರ್.ಚೆಲುವರಾಜು ಮಾತನಾಡಿ, ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಸಿದರೆ ಮಾತ್ರ ಸಂಘ ಅಭಿವೃದ್ಧಿ ಆಗುತ್ತದೆ. ಹಾಗಾಗಿ ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ನಿಸರ್ಗಪ್ರಿಯಾ, ಕಾರ್ಯನಿರ್ವಹಣಾಧಿಕಾರಿ ತಾಲೂಕು ಸುನೀಲ್‌ಕುಮಾರ್, ಸಂಘದ ಅಧ್ಯಕ್ಷ ಗೋವಿಂದಯ್ಯ, ಬೈಲುಕುಪ್ಪೆ ಗ್ರಾಪಂ ಅಧ್ಯಕ್ಷ ರಘು, ಮೈಮುಲ್ ನಿರ್ದೇಶಕ ಕೆ.ಎನ್.ಸುರೇಶ್‌ನಾಯಕ, ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಟಿ.ಸ್ವಾಮಿ, ಮುಖಂಡರಾದ ಪುಟ್ಟರಾಜ್, ರಾಜಯ್ಯ, ಮೈಮುಲ್ ಜಿಲ್ಲಾ ವ್ಯವಸ್ಥಾಪಕ ಎಲ್.ಆರ್.ಕರಿ ಬಸವರಾಜು, ಡಾ.ಸತೀಶ್, ಜಿತೇಂದ್ರ, ವಿಸ್ತರಣಾಧಿಕಾರಿ ಅವಿನಾಶ್, ಡಾ.ಸತೀಶ್, ಬೈಲಕುಪ್ಪೆ ಪಿಡಿಒ ಬೋರೇಗೌಡ, ಸಂಘದ ಕಾರ್ಯ ನಿರ್ವಹಣಾಧಿಕಾರಿ ಉಷಾರಾಣಿ, ನಿರ್ದೇಶಕರಾದ ಲಕ್ಕಿಗೌಡ, ಬೊಮ್ಮಯ್ಯ, ಸಣ್ಣಜವರಯ್ಯ, ಮುಖಂಡರಾದ ಬಸವರಾಜ್, ಸಣ್ಣಯ್ಯ, ಮಂಜುಳಾ, ಸಿಪಿಐ ದೀಪಕ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net