ವಿಶ್ವೇಶ್ವರಯ್ಯನವರ ಆದರ್ಶಗಳು ಮಾದರಿಯಾಗಲಿ

Achievers Felicitated in engineers Day Function
Published on

ಅಂಕೋಲಾ: ಇಂದಿನ ದಿನಗಳಲ್ಲಿ ವಿವಿಧ ಸೌಕರ್ಯ ಯೋಜನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂಜಿಯರ್​ಗಳ ಪಾತ್ರ ಬಹಳ ದೊಡ್ಡದಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಇಂಜಿನಿಯರ್​ಗಳಿಗೆ ಸರ್. ಎಂ. ವಿಶ್ವೇಶ್ವರಯ್ಯನವರ ಆದರ್ಶಗಳು ಮಾದರಿಯಾಗಲಿ ಎಂದು ಮಂಗಳೂರು ಮೀನುಗಾರಿಕೆ ಕಾಲೇಜಿನ ತಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಮಂಜ ನಾಯ್ಕ ಹೇಳಿದರು.

ಪಟ್ಟಣದ ಪಿ.ಎಂ. ಹೈಸ್ಕೂಲ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಇಂಜಿನಿಯರ್ಸ್ ಡೇ, ದಶಮಾನೋತ್ಸವ ಸಮಾರಂಭ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರ ಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡ ಪ್ರತಿಭಾ ಅಕಾಡೆಮಿ ಸಂಚಾಲಕ ಮತ್ತು ಉಚ್ಛ ನ್ಯಾಯಾಲಯದ ವಕೀಲ ಹೇಮಂತ ಸಹದೇವಪ್ಪ ಕರ್ಜಗಿ ಮಾತನಾಡಿ, ಕರಾವಳಿ ಜನರು ಕಷ್ಟದ ವೇಳೆಯಲ್ಲಿ ಮಾನವೀಯತೆ ತೋರಿಸುವಲ್ಲಿ ಏತ್ತಿದ ಕೈ ಎಂದರು.

ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ ಉ.ಕ.ಅಂಕೋಲಾ ಅಧ್ಯಕ್ಷ ಹರಿಹರ ಹರಿಕಂತ್ರ ಹಿಲ್ಲೂರು ಅಧ್ಯ ಕ್ಷತೆವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ಪಿಡಿಬ್ಲು್ಯಡಿ ಎಇಇ ರಾಮು ಅರ್ಗೆಕರ್, ನಿವೃತ್ತ ಎಇಇ ವಿನಾಯಕ ಶೇಟ್ ಶಿರಸಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ಉಪ ವಿಬಾಗದ ಎಇಇ ಸಂಜೀವ ಆರ್. ನಾಯಕ, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಬೀರಣ್ಣ ನಾಯಕ ಹಿಲ್ಲೂರು, ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ, ಬೊಬ್ರುವಾಡ ಗ್ರಾಪಂ. ಉಪಾಧ್ಯಕ್ಷೆ ಪರಮೇಶ್ವರಿ ಚಂದ್ರಕಾಂತ ಪಿರನಕರ್, ಗೌರವಾಧ್ಯಕ್ಷ ಪ್ರದೀಪ ನಾಯ್ಕ ತೆಂಕಣಕೇರಿ, ಪ್ರಕಾಶ ನಾಯ್ಕ, ಲಕ್ಷ್ಮಣ ನಾಯ್ಕ, ಪ್ರಭಾಕರ ನಾಯ್ಕ, ಜಗದೀಶ ನಾಯ್ಕ, ನಾಗೇಂದ್ರ ನಾಯ್ಕ ಉಪಸ್ಥಿತ ರಿದ್ದರು.

ಪಿಎಂ ಪ್ರೌಢ ಶಾಲೆಯ ಎನ್.ಸಿ.ಸಿ.ಅಧಿಕಾರಿ ಜಿ.ಆರ್.ತಾಂಡೇಲ್ ನಿರೂಪಿಸಿದರು. ನಾಗರಿಕ ವೇದಿಕೆಯ ಕಾರ್ಯದರ್ಶಿ ಪ್ರವಿಣ ನಾಯಕ ಹಿಲ್ಲೂರು ವರದಿ ವಾಚಿಸಿದರು. ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷ ಸಂತೋಷ ಆರ್.ನಾಯ್ಕ ಕೇಣಿ, ತಾಲೂಕಾಧ್ಯಕ್ಷ ಸಂತೋಷ ಆರ್.ನಾಯ್ಕ ನಿರ್ವಹಿಸಿದರು.

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

ಎಸ್​ಎಸ್​ಎಲ್​ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಾಟಿ ವೈದ್ಯ ಹನುಮಂತ ಗೌಡ ಬೆಳಂಬಾರ, ರಾಮು ಅರ್ಗೆಕರ್ ವಿನಾಯಕ ಶೇಟ್ ಶಿರಸಿ, ಕಾರವಾರ ಡಿಯುಡಿಸಿ ವಿಭಾಗದ ಇಂಜಿನಿಯರ ಭಾಸ್ಕರ ಗೌಡ, ಡಾ.ಬಿ. ಮಂಜ ನಾಯ್ಕ, ಎಸ್.ಕೆ.ಕೈರಾನ್ ಹೊನ್ನಾವರ, ಉರಗ ರಕ್ಷಕ ಪವನ್ ಎಂ. ನಾಯ್ಕ, ಮಂಜುನಾಥ ನಾಯ್ಕ ಭಟ್ಕಳ, ರಾಜು ಮಂಜಪ್ಪ ನಾಯ್ಕ, ಮುರ್ಕಂಡಿ ನಾಯ್ಕ, ಗಂಗನಾಥ ನಾರಾಯಣ ಸ್ವಾಮಿ, ಗಣಪತಿ ಗೌಡ, ರಮೇಶ ಬಂಟ ನಾಯ್ಕ, ಮುರಲೀಧರ ಜಿ. ಬಂಟ ಇವರಿಗೆ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net