

ಮಸ್ಕಿ: ದಾಂಪತ್ಯ ಜೀವನ ಸುಖವಾಗಿರಲು ಪತಿ, ಪತ್ನಿ ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಗೌಡನಬಾವಿಯಲ್ಲಿ ಸೋಮವಾರ ಕಟ್ಟೆ ಬಸವಲಿಂಗೇಶ್ವರ ಜಾತ್ರೋತ್ಸವ ಹಾಗೂ ನಾಗಪ್ಪ ತಾತನ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ 18 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಉಟಕನೂರು ಲಿಂ.ಮರಿಬಸವಲಿಂಗ ಶಿವಯೋಗಿ ಹಾಗೂ ಅವರ ಪರಮಶಿಷ್ಯ ಲಿಂ.ನಾಗಪ್ಪತಾತ ನೆಲೆಸಿದ ಪುಣ್ಯಕ್ಷೇತ್ರದಲ್ಲಿ ಮದುವೆ ಆಗುವುದು ಸೌಭಾಗ್ಯ ಎಂದರು.
ಇರಕಲ್ ಮಠದ ಶ್ರೀ ಬಸವಪ್ರಸಾದ ಶರಣರು, ಸಂತೆಕೆಲ್ಲೂರು ಮಹಾಂತಮಠದ ಮಹಾಂತಲಿಂಗ ಶಿವಾಚಾರ್ಯರು, ಅಮರೇಶ ತಾತ, ಉಟಕನೂರು ಬಸವಲಿಂಗಯ್ಯ ತಾತ, ಮಲ್ಲದಗುಡ್ಡದ ಅಯ್ಯಪ್ಪ ತಾತ, ಗೊರೇಬಾಳ ಚನ್ನಪ್ಪ ತಾತ, ಎಲೆಕೂಡ್ಲಿಗಿ ಸುವರ್ಣಯ್ಯ ತಾತ, ಶಹಾಪುರ ಬಸ್ಸಯ್ಯ ತಾತ, ಪಿಎಸ್‌ಐ ಯರಿಯಪ್ಪ ಅಂಗಡಿ, ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ, ಉಪಾಧ್ಯಕ್ಷೆ ಲಕ್ಷ್ಮೀ ನಾಗಪ್ಪ ಕೊಮನೂರು, ಪಿಡಿಒ ವಸಂತಗೀತಾ, ಮಸ್ಕಿ ಭೂನ್ಯಾಯ ಮಂಡಳಿ ಸದಸ್ಯ ಮಹಾಂತೇಶ ಜಾಲವಾಡ್ಗಿ, ಪ್ರಮುಖರಾದ ನಿರುಪಾದೆಪ್ಪ ವಕೀಲ, ಅಮರೇಶ ಗುರಿಕಾರ, ಅಮರೇಶ ಕ್ಯಾತ್ನಟ್ಟಿ, ಶೇಖರಪ್ಪ ಮೇಟಿ, ಶರಣಪ್ಪ ಜಾಲಿಹಾಳ, ದುರುಗನಗೌಡ ಪೊಲೀಸ್‌ಪಾಟೀಲ್ ಇತರರಿದ್ದರು.