ನಿಗದಿತ ಅವಧಿಯಲ್ಲಿ ಮನೆ ಕಟ್ಟಿಕೊಳ್ಳಲಿ

20 HRP 01
ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ವಿತರಿಸಿದರು. ನರೇಗಾ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ, ಅಧ್ಯಕ್ಷೆ ಟಿ. ಅನ್ನಪೂರ್ಣಮ್ಮ, ಷಣ್ಮುಖಪ್ಪ ಪಿಡಿಒ, ಉಪಾಧ್ಯಕ್ಷ ಕೆ ಹನುಮಂತಪ್ಪ, ವಾಗೀಶ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ ವಿ ಅಂಜನಪ್ಪ, ಮತ್ತೂರು ಬಸವರಾಜ, ಲಾಟಿ ದಾದಾಪೀರ್ ಇತರರಿದ್ದರು.
Published on

ಹರಪನಹಳ್ಳಿ: ಅರ್ಹ ಫಲಾನುಭವಿಗಳಿಗೆ ಅಧಿಕಾರಿಗಳು ಮನೆಗಳು ಮಂಜೂರು ಮಾಡಬೇಕೆಂದು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ತಿಳಿಸಿದರು.

ತಾಲೂಕಿನ ನೀಲಗುಂದ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಬುಧವಾರ ಆದೇಶ ಪತ್ರ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಒಟ್ಟು 37 ಪಂಚಾಯಿತಿಗಳಲ್ಲಿ 3000 ಸಾವಿರ ಮನೆಗಳು ಮಂಜೂರಾಗಿದ್ದು 10 ಪಂಚಾಯಿತಿಗಳಿಗೆ ಮುಂದಿನ ಹಂತದಲ್ಲಿ ಮಂಜೂರು ಆಗಲಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಎರಡು ಲಕ್ಷದ ಹತ್ತು ಸಾವಿರಗಳವರೆಗೆ ನಾಲ್ಕು ಹಂತದಲ್ಲಿ ಹಣ ಮಂಜೂರಾಗಲಿದೆ. ನರೇಗಾ ಕೂಲಿ ಯೋಜನೆಯ ಮೂಲಕ 100 ದಿನಗಳ ಅವಧಿಯಲ್ಲಿ 31 ಸಾವಿರ ಹಣ ಸಿಗುತ್ತದೆ.

ಸಾಮಾನ್ಯ ಮೀಸಲಾತಿ ಹೊಂದಿದವರಿಗೆ ಒಂದು ಲಕ್ಷದ ಹತ್ತೊಂಬತ್ತು ಸಾವಿರ ಸೇರಿದಂತೆ ನರೇಗಾದಿಂದ ಇವರೆಗೂ 31 ಸಾವಿರ ರೂ. ದೊರೆಯಲಿದೆ. ಈ ಹಣ ದಿನದಿಂದ ಸರ್ಕಾರ ನಿಗದಿ ಪಡಿಸಿದ ಅವಧಿಯ ಒಳಗಡೆ ಮನೆ ಕಟ್ಟಕೊಳ್ಳ ಬೇಕು ಇಲ್ಲವಾದರೆ ಹಣ ಮಂಜೂರಾಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net