ಶಾಲೆಗಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸಲಿ

19
Published on


ಪತ್ರಿಕೆಯು ಮಕ್ಕಳಿಗೆ ಓದುವ ಆಸಕ್ತಿ ಬೆಳೆಸುವ ಪ್ರಾಯೋಗಿಕ ವಸ್ತುವಾಗಿದೆ. ಹಾಗಾಗಿ ಶಾಲೆಗಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು ಎಂದು ನಾರಿ ಟ್ರಸ್ಟ್ ಅಧ್ಯಕ್ಷ ಮುರಳೀಧರ್ ಹೇಳಿದರು.

ತಾಲೂಕಿನ ತಲಕಾಡು ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಹಿಂದೆ ಪತ್ರಿಕೆಗಳೇ ಮುಖ್ಯವಾಹಿನಿಯಲ್ಲಿದ್ದವು. ಇತ್ತೀಚೆಗೆ ಟಿವಿ ಮಾಧ್ಯಮ ಪರಿಣಾಮಕಾರಿಯಾಗಿ ಬೆಳೆದಿದೆ. ಆದರೂ ಪತ್ರಿಕೆಗಳಿಗೆ ತನ್ನದೇ ಆದ ಸ್ಥಾನವಿದೆ ಎಂದು ಹೇಳಿದರು. ಪತ್ರಿಕೆಯಲ್ಲಿ ಪ್ರಕಟವಾಗುವ ವಾಚಕರ ವಾಣಿ, ಸಂಪಾದಕೀಯ, ಅಂಕಣಗಳು, ಕ್ರೀಡಾ ಸುದ್ದಿಗಳು ಪತ್ರಿಕೆಯ ಯಾವ ಭಾಗದಲ್ಲಿ ಪ್ರಕಟವಾಗುತ್ತವೆ. ಅವುಗಳ ಪ್ರಾಮುಖ್ಯತೆ ಏನು ಎಂಬುದನ್ನು ಶಿಕ್ಷಕರು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಚಲಿತ ವಿದ್ಯಮಾನ ತಿಳಿದುಕೊಳ್ಳಲು ಕನ್ನಡ ದಿನಪತ್ರಿಕೆಯನ್ನು ಪ್ರತಿ ಮನೆಯಲ್ಲಿಯೂ ತರಿಸುವಂತಾಗಬೇಕು. ಇದಕ್ಕಾಗಿ ಮಕ್ಕಳು ಪಾಲಕರಲ್ಲಿ ಒತ್ತಾಯ ಹಾಕಬೇಕು. ವಿಜಯವಾಣಿ ಪತ್ರಿಕೆ ವಿದ್ಯಾರ್ಥಿ ಸಂಚಿಕೆ ಹೊರತರುತ್ತಿದ್ದು, ಓದುವ ಮೂಲಕ ತಮ್ಮ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ವಿಜಯವಾಣಿ ಪತ್ರಿಕೆ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ, ಮುಖ್ಯಶಿಕ್ಷಕ ಎಸ್.ನಿಂಗರಾಜು, ಶಿಕ್ಷಕರಾದ ಸವಿತಾ, ವೀರತ್ತಪ್ಪ, ಸುಂದರ ನಾಯ್ಕ, ಮಲ್ಲೇಶ್ ಗೌಡ, ಜಯಂತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net