ಗುರು-ಶಿಷ್ಯರ ಸಂಬಂಧ ಗಟ್ಟಿಗೊಳ್ಳಲಿ

Let the guru-disciple relationship be strengthened
ಕಮತಗಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಗಲಕೋಟೆ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶ್ರೀಹರಿ ಧೂಪದ ಮಾತನಾಡಿದರು. ಹುಚ್ಚೇಶ್ವರ ಸ್ವಾಮೀಜಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಆರ್.ಎಸ್. ಲೆಕ್ಕದ, ಎಸ್.ಟಿ. ಬೋರಣ್ಣವರ ಇದ್ದರು.
Published on

ಕಮತಗಿ: ಪ್ರಾಚೀನ ಕಾಲದ ಗುರು- ಶಿಷ್ಯರ ಗಟ್ಟಿ ಸಂಬಂಧದಂತೆ ಪ್ರಸ್ತುತ ಕಾಲಘಟ್ಟದಲ್ಲಿಯು ಗುರು-ಶಿಷ್ಯರ ಅನನ್ಯವಾಗಿ ನಡೆದುಕೊಂಡು ಗುರು-ಶಿಷ್ಯರ ಸಂಬಂಧ ಗಟ್ಟಿಗೊಳ್ಳಬೇಕಿದೆ ಎಂದು ಬಾಗಲಕೋಟೆ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶ್ರೀಹರಿ ಧೂಪದ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವದ್ಧಿ ಸಂಸ್ಥೆ ಹಾಗೂ ಶ್ರೀ ಹುಚ್ಚೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿವತ್ತ ಶಿಕ್ಷಕರಿಗೆ ಗುರುವಂದನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಣ್ಣ ಶಿವಶರಣರ ಮನಸ್ಥಿತಿ ಅರಿಯಲು ಅವರಿಗೆ ಗೊತ್ತಿಲ್ಲದೆ ಪರೀಕ್ಷೆ ಮಾಡುತ್ತಿದ್ದರು. ಇಂದಿನ ಕಾಲದಲ್ಲಿ ಈ ರೀತಿಯ ಪರೀಕ್ಷೆಗಳು ದೂರವಾಗಿವೆ. ಪರಿಶ್ರಮದ ಮೂಲಕ ಜ್ಞಾನ ಪಡೆಯುವ ಕಾಲ ಒಂದಿತ್ತು. ಆದರೆ ಈಗ ಜ್ಞಾನವು ಸರಳವಾಗಿ ದೊರೆಯುತ್ತಿದೆ ಎಂದರು.

ಉದ್ಘಾಟನೆ ನೆರವೇರಿಸಿ, ಪ್ರಾಚಾರ್ಯ ಎಸ್.ವಿ. ಬಾಗೇವಾಡಿ ಮಾತನಾಡಿ, ಶಿಕ್ಷಕರು ರಾಷ್ಟದ ರಕ್ಷಕರು. ಸಮಾಜದ ಅಜ್ಞಾನ ಹೋಗಲಾಡಿಸಿ, ಸುಜ್ಞಾನ ನೀಡುವುದು ಗುರುವಿನ ಶಕ್ತಿಯಾಗಿದೆ. ಮಕ್ಕಳಿಗೆ ತಿಳಿವಳಿಕೆ ನೀಡಿ ನಾಗರಿಕ ಸಮಾಜದಲ್ಲಿ ಬದುಕುವ ಕಲೆ ಕಲಿಸುತ್ತಾರೆ. ಗುರುಗಳಿಗೆ ಶಿರಬಾಗಿ ನಡೆಯಬೇಕು ಎಂದರು.

ಶ್ರೀ ಹುಚ್ಚೇಶ್ವರ ಸಂಸ್ಥಾನಮಠ ಹುಚ್ಚೇಶ್ವರ ಸ್ವಾಮೀಜಿ, ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಿವತ್ತ ಹಿರಿಯ ಶಿಕ್ಷಕರಾದ ಆರ್.ಎಸ್. ಲೆಕ್ಕದ, ಎಸ್.ಟಿ. ಬೋರಣ್ಣವರ, ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಎ.ಎಸ್. ಕಲ್ಯಾಣಶೆಟ್ಟಿ, ಪ್ರಾಚಾರ್ಯ ಎಸ್.ವಿ. ಬಾಗೇವಾಡಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಸ್.ಕೆ. ಮುತ್ತಲಗೇರಿ, ವೀರಭದ್ರಪ್ಪ ಆರಿ ವೇದಿಕೆಯಲ್ಲಿದ್ದರು.

ಸಂಸ್ಥೆ ಕಾರ್ಯದರ್ಶಿ ಶಂಕರ ವನಕಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಬಿ.ವ್ಹಿ. ಬೀರಕಬ್ಬಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net