ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

4 SND 01
ಸಿಂಧನೂರು ಗಾಂಧಿವೃತದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ತಾಲೂಕು ಅಧ್ಯಕ್ಷ ಆಸೀಫ್ ಖುರೇಷಿ, ಜಿಲ್ಲಾ ಸಮಿತಿ ಸದಸ್ಯ ಸೈಯದ್ ಇರ್ಫಾನ್, ಬಹುತ್ವ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ನಾಗರಾಜ ಪೂಜಾರ್ ಇತರರಿದ್ದರು.
Published on

ಸಿಂಧನೂರು: ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಜ್ವಲ್‌ನನ್ನು ಬಂಧಿಸಲು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ನಗರದ ಗಾಂಧಿವೃತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ಮಾಡಿದ್ದು, ಕಾಲೇಜು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೀಟು ಕೊಡಿಸುವುದಾಗಿ ನಂಬಿಸಿ ಅವರನ್ನೂ ಅತ್ಯಾಚಾರ ಮಾಡಿದ್ದಾನೆ. ಇಂಥಹ ಮನಸ್ಥಿತಿ ಉಳ್ಳವರನ್ನು ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

ಕುಸ್ತಿಯಲ್ಲಿ ದೇಶಕ್ಕೆ ಪದಕಗಳನ್ನು ತಂದು ಕೊಟ್ಟ ಮಹಿಳಾ ಕ್ರೀಡಾಪಟುಗಳ ಮೇಲು ಈ ರೀತಿಯ ಘಟನೆ ನಡೆದಿದ್ದು, ಆದರೆ ಈವರೆಗೂ ಅವರಿಗೆ ನ್ಯಾಯಾ ಸಿಕ್ಕಿಲ್ಲ. ಅಂಥದರಲ್ಲಿ ಸಾಮಾನ್ಯ ಮಹಿಳೆಯರ ಗತಿಯೇನು?. ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net