ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲಿ

web3
ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಸ್.ವಿ.ಹಿರೇಮಠ, ಎಸ್.ಆರ್.ಖನ್ನಿನಾಯ್ಕರ, ಮಹೇಶ ಕರೀಕಟ್ಟಿ ಇತರರು ಇದ್ದರು.
Published on

ಬೈಲಹೊಂಗಲ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದು, ಶೀಘ್ರ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮೂಲಕ ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸರ್ಕಾರ ನಮ್ಮನ್ನು ಕಾಯಂಗೊಳಿಸಲು ಕ್ರಮ ಜರುಗಿಸಬೇಕೆಂದು ಮನವಿ ಮೂಲಕ ಆಗ್ರಹಿಸಿದರು. ಅತಿಥಿ ಉಪನ್ಯಾಸಕರಾದ ಎಸ್.ವಿ.ಹಿರೇಮಠ, ಎಸ್.ಆರ್.ಖನ್ನಿನಾಯ್ಕರ, ಮಹೇಶ ಕರೀಕಟ್ಟಿ, ಡಾ.ಆರ್.ವೈ.ಗೌಡರ, ಶೇಖರ ಗಡಾದ, ಕೀರಪ್ಪ ಕೋಣಿನವರ, ಸಂಗಪ್ಪ ಹುಲಗನ್ನವರ, ವೀರಣ್ಣ ಅಂಗಡಿ, ನಿರ್ಮಲಾ ಸತ್ತಿಗೇರಿ, ಮೀನಾಕ್ಷಿ ವಕ್ಕುಂದಮಠ, ನಂದೀಶ ಕರಾಳೆ, ರಾಜಶೇಖರ ವಡ್ಲಿ, ಮಲ್ಲಿಕಾರ್ಜುನ ದಾಸೋಗ, ರಮೇಶ ಯರಗಟ್ಟಿ, ಡಾ.ಮರಿಗೌಡ ಚೋಬಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net