ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆ ತಲುಪಲಿ

ಸಿ.ಹಿಂದಲಹಳ್ಳಿಯಲ್ಲಿ ಭಾನುವಾರ  ಹಳ್ಳಿ ಮೈಸೂರು ಹೋಬಳಿಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ರಾಜೇಗೌಡ, ಪುಟ್ಟಯ್ಯ, ಸ್ವಾಮಿಗೌಡ, ಮುಂಜೇಗೌಡ, ಮಹೇಂದ್ರ, ಪುಟ್ಟೇಗೌಡ ಇದ್ದರು.
ಸಿ.ಹಿಂದಲಹಳ್ಳಿಯಲ್ಲಿ ಭಾನುವಾರ ಹಳ್ಳಿ ಮೈಸೂರು ಹೋಬಳಿಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ರಾಜೇಗೌಡ, ಪುಟ್ಟಯ್ಯ, ಸ್ವಾಮಿಗೌಡ, ಮುಂಜೇಗೌಡ, ಮಹೇಂದ್ರ, ಪುಟ್ಟೇಗೌಡ ಇದ್ದರು.
Published on

ಹೊಳೆನರಸೀಪುರ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪ್ರತಿ ಕುಟುಂಬಕ್ಕೂ ತಲುಪುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಶ್ರಮಿಸಬೇಕು ಎಂದು ಹಳ್ಳಿ ಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿಂದಲಹಳ್ಳಿ ರಾಜೇಗೌಡ ತಿಳಿಸಿದರು.

ಸಿ.ಹಿಂದಲಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು ಜನಪರ ಯೋಜನೆಗಳನ್ನ ಜಾರಿಗೊಳಿಸಿ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಮುಖಂಡರು ಸರ್ಕಾರದ ಯೋಜನೆಗಳ ಪರವಾಗಿ ಪ್ರಚಾರ ಮಾಡಬೇಕು. ಜತೆಗೆ ಕೆಲಸ ಮಾಡಿಕೊಡುವ ಕೊಡುವ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದರೂ ಎಲ್ಲರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಬೇಕು. ಆ ಮೂಲಕ ಪಕ್ಷದ ವೇದಿಕೆಯಲ್ಲಿ ಯಾವುದೇ ಗೊಂದಲಗಳು ನಿರ್ಮಾಣವಾಗದಂತೆ ಎಲ್ಲರೂ ಮುನ್ನಡೆಯೋಣ ಎಂದು ತಿಳಿಸಿದರು.

ಅರಕಲಗೂಡು ಕ್ಷೇತ್ರದ ಬಗರ್ ಹುಕುಂ ಸಮಿತಿ ಸದಸ್ಯ ಪುಟ್ಟಯ್ಯ ಮಾತನಾಡಿ, ಸರ್ಕಾರಿ ಜಮೀನು ಉಳ್ಳವರ ಪಾಲಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಉಳುಮೆ ಮಾಡುವ ಪ್ರತಿ ಬಡ ರೈತನ ಹೆಸರಿಗೆ ಸಿಗುವಂತಾಗಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಪುಟ್ಟೇಗೌಡ,ಮಹೇಂದ್ರ, ತಮ್ಮಯ್ಯ,ಮುಂಜೇಗೌಡ, ಸ್ವಾಮಿ ಗೌಡ, ಚಿಕ್ಕೆಗೌಡ, ತಿಪ್ಪೇಸ್ವಾಮಿ, ಲೋಕೇಶ್, ದೊರೆಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net