ಸರ್ಕಾರಿ ಕ್ಷೇತ್ರದತ್ತ ಜಿಎಸ್‌ಬಿ ಸಮುದಾಯ ಆಸಕ್ತಿ ತೋರಲಿ

gan
Published on

ಕುಂದಾಪುರ: ಒಂದು ಕಾಲದಲ್ಲಿ ಜಿಎಸ್‌ಬಿ ಸವಾಜದ ಅನೇಕ ಮಂದಿ ಸರ್ಕಾರಿ ಅಧಿಕಾರಿಗಳಾಗಿ ಉನ್ನತ ಸ್ಥಾನದಲ್ಲಿದ್ದರು. ಆದರೆ ಇಂದು ಈ ಸಂಖ್ಯೆ ವಿರಳವಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ವಿದ್ಯಾರ್ಥಿಗಳು ಈ ದಿಶೆಯಲ್ಲಿ ಪ್ರಯತ್ನಿಸಬೇಕು ಆಗ ವಾತ್ರ ಸವಾಜ, ಕೃಷಿ, ವ್ಯಾಪಾರದಂತಹ ಮೂಲಭೂತ ಕ್ಷೇತ್ರದೊಂದಿಗೆ ಇಂದಿನ ಕಾಲಟ್ಟದ ವೈದ್ಯಕೀಯ, ವಾಹಿತಿ ತಂತ್ರಜ್ಞಾನದಂತಹ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ ಎಂದು ಶ್ರೀ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಮಂಗಳೂರು ಜಿಎಸ್‌ಬಿ ದೇವಾಲಯಗಳ ಒಕ್ಕೂಟ, ಕುಂದಾಪುರ ವಲಯ ವತಿಯಿಂದ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಮಂಗಳವಾರ ‘ಸುಕೃತ- 25’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಆರ್ಬೇಟ್ ವಾಧವ್ ಕಾಮತ್ ಶುಭಾಶಂಸನೆ ಮಾಡಿದರು. ಸವಾಜದ ಹಿರಿಯ ಸಾಧಕ ಕೋಟೇಶ್ವರ ಶ್ರೀ ಭುವನೇಂದ್ರ ಆಯುರ್ವೇದ ವೈದ್ಯಶಾಲಾ ವೈದ್ಯಾಧಿಕಾರಿ ಡಾ.ಎಂ.ಎಸ್.ಕಾಮತ್, ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ದಿನಕರ ಶೆಣೆ, ಕೋಟ ಶ್ರೀ ಕಾಶೀ ಮಠದ ದೇವದತ್ತ ಭಟ್, ಕೆ.ರಾಧಾಕೃಷ್ಣ ನಾಯಕ್ ಕೋಟ, ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ ಶೆಣೈ, ಭಜನಾ ಸಂತರಾದ ವಿನಯಾ ವಿಠಲ್ ಶೆಣೈ, ವಿಠೋಬ ಕಿಣಿ ಅವರನ್ನು ಶ್ರೀಗಳು ಗೌರವಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ರ‌್ಯಾಂಕ್ ಪಡೆದ, 2025ನೇ ಸಾಲಿನಲ್ಲಿ ಸಿಎ ಪರೀಕ್ಷೆ, ಎಂಬಿಬಿಎಸ್, ಎಂಟೆಕ್, ಪ್ಯಾರಾ ಮೆಡಿಕಲ್‌ನಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು.

ವಲಯ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ಸ್ವಾಗತಿಸಿದರು. ಸದಾನಂದ ಪೈ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net