ಮಹಾನ್ ನಾಯಕರ ಆದರ್ಶ ಅಳವಡಿಸಿಕೊಳ್ಳಲಿ

16 SANDOOR 05
ಸಂಡೂರು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶೈಲನಿವಾಸ ಕಟ್ಟಡವನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸಿದರು. ವಿದ್ಯಾ ಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್.ನಾನಾವಟೆ, ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ಇದ್ದರು.
Published on

ಸಂಡೂರು: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಏಕೈಕ ಸಂಸ್ಥೆ ಶ್ರೀಶೈಲೇಶ್ವರ ವಿದ್ಯಾಕೇಂದ್ರವಾಗಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.

ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶೈಲ ನಿವಾಸವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಚಿದಂಬರ ನಾನಾವಟೆ ಹಾಗೂ ಕುಮಾರ ನಾನಾವಟೆ ಅವರು ನನ್ನನ್ನು ಒಬ್ಬ ಶಾಸಕಿಯಾಗಿ ಆಹ್ವಾನಿಸದೆ ಕುಟುಂಬದ ಹಿರಿಯಕ್ಕನಾಗಿ ಆಹ್ವಾನಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ವಿಜಯಪುರದಿಂದ ವಲಸೆ ಬಂದ ಕುಟುಂಬ ಇಂದು ಸಂಡೂರಿನಲ್ಲಿ ಶಿಕ್ಷಣದ ಅಸ್ಥಿತ್ವ ಕಾಯ್ದು ಕೊಂಡಿದೆ. ಈ ಸಂಸ್ಥೆಯಲ್ಲಿ ನನ್ನ 3ಮಕ್ಕಳು ವಿದ್ಯಾಭ್ಯಾಸ ಮಾಡಿದ್ದು, ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪಡೆದು ಉನ್ನತ ಸ್ಥಾನದಲ್ಲಿದ್ದಾರೆ. ದೇಶ, ನಾಡು ನುಡಿಗಾಗಿ ಹೋರಾಡಿದ ಮಹಾನ್ ನಾಯಕರ ಜೀವನ ಚರಿತ್ರೆಗಳನ್ನು ಓದುವುದರ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಂಸ್ಥೆ ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ಮಾತನಾಡಿ, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸಂಸ್ಕಾರವನ್ನು ಪಡೆಯುವಂತಹ ಹೆಮ್ಮರವಾಗಿ ಬೆಳೆದಿದೆ ಎಂದರು. ವಿದ್ಯಾ ಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್.ನಾನಾವಟೆ, ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀಬಾಯಿ ಎಸ್.ನಾನಾವಟೆ, ಪ್ರಾಚಾರ್ಯ ಯು.ದೇವರಾಜ, ಪ್ರಮುಖರಾದ ಆನಂದ, ಗೋಣಿಬಸಪ್ಪ, ಡಾ.ರಾಜೇಶ್ವರಿ, ಜಿ.ಎಂ.ಅಶೋಕ, ಗೋಣಿಬಸಪ್ಪ, ತಾಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net