ಆರೋಗ್ಯ, ಶಿಕ್ಷಣಕ್ಕೆ ಸರ್ಕಾರಗಳು ಒತ್ತು ನೀಡಲಿ

11M.D.R.4
ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ.ಕೆ. ನಿಸರ್ಗಾ, ಎ.ಸುಮಲತಾ, ಎಚ್.ಡಿ.ರೇಷ್ಮಾ, ಎ.ರಮ್ಯಾ ಅವರನು ್ನಸನ್ಮಾನಿಸಲಾಯಿತು. ಕೆ.ಟಿ.ಹನುಮಂತ, ಡಾ.ರವೀಂದ್ರಬಿ.ಗೌಡ, ಎಚ್.ಮಾದೇಗೌಡ, ಡಾ.ಸಿ.ನವ್ಯಶ್ರೀ, ಎಸ್.ಜೆ.ಮಂಜುನಾಥ ಇದ್ದರು.
Published on

ಮದ್ದೂರು: ಸರ್ಕಾರಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇದೆ ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆಯ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ದಾದಿಯರ ದಿನ ಆಚರಣೆ ಮತ್ತು ದಾದಿಯರ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನಿಗೆ ಆರೋಗ್ಯ ಮತ್ತು ಶಿಕ್ಷಣ ಬಹಳ ಅತ್ಯವಶ್ಯಕ. ಆದ್ದರಿಂದ ಸರ್ಕಾರಗಳು ಈ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಬೇಕು. ಜತಗೆ ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

1965 ಮೇ 12 ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ. ದಾದಿಯರ ಮಾತೆ ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ನೊಬೆಲ್ ಪುರಸ್ಕಾರ ಲಭ್ಯವಾಗಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ದಾದಿಯರಾದ ವಿ.ಕೆ. ನಿಸರ್ಗಾ, ಎ. ಸುಮಲತಾ, ಎಚ್.ಡಿ.ರೇಷ್ಮಾ, ಎ.ರಮ್ಯಾ ಅವರನ್ನು ಅಭಿನಂದಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಅಲಯನ್ಸ್ ಸಂಸ್ಥೆಯ 1ನೇ ಜಿಲ್ಲಾ ಉಪ ಪ್ರಾಂತಪಾಲ ಎಚ್.ಮಾದೇಗೌಡ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ನವ್ಯಶ್ರೀ, ಕೃಷಿಕ ಅಲಯನ್ಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್.ಜೆ.ಮಂಜುನಾಥ, ಜರ್ಸಿ ಮಹೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net